ಭೋಪಾಲ್: 16 ವರ್ಷದ ಬಾಲಕ ಪಬ್‍ಜಿ ಆಡುವಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದಿದೆ.
ಫರ್ಕಾನ್ ಖುರೇಶಿ(16) ಮೃತಪಟ್ಟ ಬಾಲಕ. 12ನೇ ತರಗತಿ ಓದುತ್ತಿದ್ದ ಫರ್ಕಾನ್ ಮೃತಪಡುವ ಮೊದಲು ಸತತ 6 ಗಂಟೆಯಿಂದ ಪಬ್‍ಜಿ ಗೇಮ್ ಆಡುತ್ತಿದ್ದನು. ಈ ವೇಳೆ ಅವನು ಜೋರಾಗಿ ಕಿರುಚಿ ಕೆಳಗೆ ಬಿದ್ದಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ.
Advertisement
ಮೇ 28ರಂದು ನಾವು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೇವು. ಈ ವೇಳೆ ಫರ್ಕಾನ್ ಊಟ ಮಾಡಿದ ನಂತರ ಪಬ್‍ಜಿ ಆಡಳು ಆರಂಭಿಸಿದ್ದ. ಫರ್ಕಾನ್ ಸಹೋದರಿ ಫಿಜಾ ಆತನ ಪಕ್ಕದಲ್ಲಿಯೇ ಕುಳಿತಿದ್ದಳು ಎಂದು ಫರ್ಕಾನ್ ತಂದೆ ಹರೂಣ್ ರಶೀದ್ ಖುರೇಶಿ ತಿಳಿಸಿದ್ದಾರೆ.
Advertisement
Advertisement
ಪಬ್‍ಜಿ ಆಡುವಾಗ ನನ್ನ ಸಹೋದರ, ಬ್ಲಾಸ್ಟ್ ಆಗೋಯ್ತು, ಬ್ಲಾಸ್ಟ್ ಆಗೋಯ್ತು ಎಂದು ಕಿರುಚುತ್ತಾ ತನ್ನ ಇಯರ್ ಫೋನ್ ತೆಗೆದು ಮೊಬೈಲ್ ಎಸೆದು ಅಳುತ್ತಿದ್ದನು. ಬಳಿಕ ಅಯಾನ್ ನಾನು ನಿನ್ನ ಜೊತೆ ಆಡುವುದಿಲ್ಲ. ನಿನ್ನಿಂದ ನಾನು ಸೋತಿದ್ದೇನೆ ಎಂದು ಹೇಳುತ್ತಾ ಅಳುತ್ತಿದ್ದನು ಎಂದು ಫಿಜಾ ತಿಳಿಸಿದ್ದಾರೆ.
Advertisement
ಫರ್ಕಾನ್ ಜೋರಾಗಿ ಕಿರುಚಿ ಕೆಳಗೆ ಬಿದ್ದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಫರ್ಕಾನ್ ಮೃತಪಟ್ಟಿದ್ದನು. ಈ ಬಗ್ಗೆ ಮಾತನಾಡಿದ ಡಾ. ಅಶೋಕ್ ಜೈನ್, ಆತ ಈಜುಗಾರ. ಆತನ ಹೃದಯ ಆರೋಗ್ಯವಾಗಿದೆ. ಆದರೆ ಪಬ್‍ಜಿ ಆಡುವ ಎಕ್ಸೈಟ್‍ಮೆಂಟ್‍ನಿಂದ ಆತನಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ
ಪಬ್‍ಜಿ ಆಡಬೇಡ ಎಂದು ಸಾಕಷ್ಟು ಬಾರಿ ಬಾರಿ ಮಗನಿಗೆ ಬುದ್ಧಿವಾದ ಹೇಳಿದ್ದೆ. ಆದರೆ ನನ್ನ ಮಾತಿಗೆ ಬೆಲೆ ನೀಡದೇ ಪ್ರತಿ ದಿನ ಪಬ್‍ಜಿ ಆಡುತ್ತಿದ್ದನು. ಹೀಗಾಗಿ ನಾನು ಮೊಬೈಲ್‍ನಲ್ಲಿ ಪಬ್‍ಜಿ ಗೇಮ್ ಡಿಲೀಟ್ ಮಾಡಿದ್ದೆ ಎಂದು ಫರ್ಕಾನ್ ತಂದೆ ಹರೂಣ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.