ರೇಪ್‌ ಮಾಡಲು ಸಹಕರಿಸದ ಚಿಕ್ಕಮ್ಮನನ್ನೇ ಕೊಲೆಗೈದ ಬಾಲಕ!

Public TV
1 Min Read
UPPINANGADY 2

ಮಂಗಳೂರು: ಅಪ್ರಾಪ್ತ ಬಾಲಕನೋರ್ವ ತನ್ನ ಚಿಕ್ಕಮ್ಮನ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ಸಹಕರಿಸದ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉಪ್ಪಿನಂಗಡಿಯ (Uppinangady) ಪೆರ್ನೆ ಬಳಿ ನಡೆದಿದೆ.

ಪೆರ್ನೆಯ ಬಿಳಿಯೂರು ನಿವಾಸಿ ಹೇಮಾವತಿ (37) ಕೊಲೆಯಾದ ದುರ್ದೈವಿ. ಕಳೆದ ಜೂ.17 ರಂದು ಮಲಗಿದ್ದಲ್ಲೇ‌ ಸಾವನ್ನಪ್ಪಿದ್ದ ಸ್ಥಿತಿಯಲ್ಲಿದ್ದ ಹೇಮಾವತಿ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಪೊಲೀಸರಿಗೆ ಮನೆಯವರು‌ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅನುಮಾನದಿಂದ ತನಿಖೆ ನಡೆಸಿದ್ದರು.

ಈ ವೇಳೆ 10 ನೇ ತರಗತಿಯ ವಿದ್ಯಾರ್ಥಿ 15 ವರ್ಷದ ಅಪ್ರಾಪ್ತ ಬಾಲಕ ತನ್ನ ಚಿಕ್ಕಮ್ಮನನ್ನೇ ಕೊಲೆ ಮಾಡಿರೋದು ಬೆಳಕಿಗೆ ಬಂದಿದ್ದು, ಬಾಲಕ ಕೃತ್ಯವನ್ನ ಒಪ್ಪಿಕೊಂಡಿದ್ದಾನೆ. ಕೊಲೆಗೀಡಾದ ಹೇಮಾವತಿಯ ಅಕ್ಕನ ಮಗನಾದ ಈ ಅಪ್ರಾಪ್ತ ಬಾಲಕ ಜೂ.17ರಂದು ಹೇಮಾವತಿ ಮನೆಗೆ ಬಂದು ತಂಗಿದ್ದ. ರಾತ್ರಿ ವೇಳೆ ಮಲಗಿದ್ದ ಚಿಕ್ಕಮ್ಮನನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದು, ಈ ವೇಳೆ ಹೇಮಾವತಿ ತಡೆದು ಬಳಿಕ ಬಾಲಕನಿಗೆ ಬುದ್ದಿಮಾತು ಹೇಳಿ ಮಲಗಿಸಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಗೆ ಮೈಸೂರಿನ ಹೋಟೆಲ್‌ನಲ್ಲಿ ನಡೆದಿತ್ತಾ ಸ್ಕೆಚ್‌? – ಇಡೀ ಪ್ಲಾನ್ ಮಾಸ್ಟರ್ ಮೈಂಡ್‌ ಯಾರು?

UPPINANGADY

ಈ ಅತ್ಯಾಚಾರ ಬೆಳಕಿಗೆ ಬರುತ್ತೆ ಅನ್ನೋ ಹೆದರಿಕೆಯಿಂದ ಬಾಲಕ ಬಳಿಕ ಚಿಕ್ಕಮ್ಮನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಾರನೇ ದಿನ ಎಲ್ಲರಿಗೂ ಆತನೇ ಕರೆ ಮಾಡಿ ಚಿಕ್ಕಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದ. ಈ ಕಾರಣದಿಂದಲೇ‌ ಪೊಲೀಸರಿಗೆ ಅನುಮಾನವಾಗಿ ತನಿಖೆ ನಡೆಸಿದಾಗ ಕೊಲೆ ಕೃತ್ಯ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article