Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

Bengaluru City

ಮನಸಿಗೆ ಮುತ್ತಿಕ್ಕುವ ಮಿಸ್ಸಿಂಗ್ ಬಾಯ್!

Public TV
Last updated: March 22, 2019 6:19 pm
Public TV
Share
2 Min Read
Missing Boy
SHARE

ಬೆಂಗಳೂರು: ರಘುರಾಮ್ ನಿರ್ದೇಶನದ ಮಿಸ್ಸಿಂಗ್ ಬಾಯ್ ಚಿತ್ರ ತೆರೆ ಕಂಡಿದೆ. ಮನಮಿಡಿಯುವ ಸತ್ಯ ಕಥೆಯಾಧಾರಿತ ಚಿತ್ರವೆಂಬ ಕಾರಣದಿಂದ ಮಿಸ್ಸಿಂಗ್ ಬಾಯ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆ ನಂತರದಲ್ಲಿ ನಿರ್ದೇಶಕರು ಪ್ರತಿಯೊಂದು ಹಂತದಲ್ಲಿಯೂ ಈ ಸಿನಿಮಾವನ್ನು ಕುತೂಹಲದ ಉತ್ತುಂಗದಲ್ಲಿಯೇ ಕಾಪಾಡಿಕೊಂಡು ಬಂದಿದ್ದರು. ಬಿಡುಗಡೆಯಾಗೋದು ತಡವಾದರೂ ಪ್ರೇಕ್ಷಕರ ಗಮನ ಅತ್ತಿತ್ತ ಸರಿಯದಂತೆ ನೋಡಿಕೊಂಡಿದ್ದ ಮಿಸ್ಸಿಂಗ್ ಬಾಯ್ ನ ಭಾವುಕ ಕಥೆಯನ್ನು ಕಣ್ತುಂಬಿಕೊಂಡ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ.

Missing Boy a

ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಮಿಸ್ಸಿಂಗ್ ಬಾಯ್ ಚಿತ್ರ ತೊಂಬತ್ತರ ದಶಕದಲ್ಲಿ ಇದೇ ಕರ್ನಾಟಕದಲ್ಲಿ ನಡೆದಿದ್ದ ಕಥೆಯಾಧಾರಿತ ಚಿತ್ರ. ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದಿದ್ದ ಈ ಕಥೆಯನ್ನು ರಘುರಾಮ್ ಕೈಗೆತ್ತಿಕೊಂಡಾಗ ಎಲ್ಲರೂ ಬೆರಗಾಗಿದ್ದದ್ದು ನಿಜ. ಆದರೆ ಇಂಥಾ ಬೆರಗನ್ನು ಸತ್ಯ ಘಟನೆಯೊಂದರ ಸುತ್ತಾ ದೃಶ್ಯ ಕಟ್ಟಿದ ನಂತರವೂ ಜೀವಂತವಾಗಿಡೋದು ಕಷ್ಟ. ನಿರ್ದೇಶಕ ಕಥೆಯ ಪಾತ್ರಗಳನ್ನೇ ಉಸಿರಾಡದಿದ್ದರೆ ಅದು ಖಂಡಿತಾ ಸಾಧ್ಯವಾಗೋದಿಲ್ಲ. ಆದರೆ ರಘುರಾಮ್ ನೈಜ ಘಟನೆಯ ಎಲ್ಲ ಭಾವಗಳನ್ನೂ ಬೊಗಸೆಯಲ್ಲಿ ಹಿಡಿದು ತಾಜಾತನದಿಂದಲೇ ಪ್ರೇಕ್ಷಕರ ಮನಸಿಗೆ ಸೋಕಿಸುವಲ್ಲಿ ಗೆದ್ದಿದ್ದಾರೆ. ಮಿಸ್ಸಿಂಗ್ ಬಾಯ್ ಚಿತ್ರ ಆಪ್ತ ಅನ್ನಿಸೋದು ಈ ಕಾರಣದಿಂದಲೇ.

missing boy

ಸತ್ಯ ಘಟನೆಗೆ ಬದ್ಧವಾಗಿಯೇ ಹುಬ್ಬಳ್ಳಿಯ ನೆಲದಿಂದಲೇ ಈ ಚಿತ್ರದ ದೃಶ್ಯಾವಳಿಗಳು ಬಿಚ್ಚಿಕೊಳ್ಳುತ್ತವೆ. ಅಲ್ಲಿನ ರೈಲ್ವೇ ನಿಲ್ದಾಣದಲ್ಲಿ ಹೆತ್ತವರ ಕೈ ತಪ್ಪಿಸಿಕೊಂಡು ರೈಲಿನಲ್ಲಿ ಕಾಣೆಯಾಗೋ ಹುಡುಗನ ಆರ್ತಸ್ಥಿತಿಯನ್ನು ಎಲ್ಲರ ಮನಸಿಗೂ ಅಂಟಿಕೊಳ್ಳುವಂಥಾ ಭಾವ ತೀವ್ರತೆಯೊಂದಿಗೆ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಅದೇ ಬಿಗಿಯಲ್ಲಿಯೇ ಕಥೆ ವಿದೇಶಕ್ಕೂ ಸಂಚರಿಸುತ್ತೆ. ಮಗುವನ್ನು ಕಳೆದುಕೊಂಡ ಹೆತ್ತವರ ಸಂಕಟ ಮತ್ತು ಕರುಳ ಬಂಧದ ಸ್ವಪ್ನ ಬಿದ್ದಂತೆ ದೂರದ ದೇಶದಲ್ಲಿ ತಲ್ಲಣಿಸೋ ನಾಯಕನ ಮಿಡಿತಗಳನ್ನು ಪ್ರೇಕ್ಷಕರು ಅತ್ತಿತ್ತ ಹಂದಾಡಲೂ ಆಸ್ಪದ ಕೊಡದ ರೀತಿಯಲ್ಲಿ ನಿರೂಪಿಸಲಾಗಿದೆ.

missing boy

ನಾಯಕ ಗುರುನಂದನ್ ಇದೇ ಮೊದಲ ಸಾರಿ ಅವರ ಇಮೇಜಿನಾಚೆಗಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಭಾವಪ್ರಧಾನ ಸನ್ನಿವೇಶಗಳಲ್ಲಿಯಂತೂ ನೋಡುಗರು ತಲ್ಲಣಿಸುವಂತೆ ಪರಿಣಾಮಕಾರಿಯಾದ ನಟನೆ ನೀಡಿದ್ದಾರೆ. ಈ ಚಿತ್ರದ ಮೂಲಕವೇ ಗುರುನಂದನ್ ಚಿತ್ರ ಜೀವನದಲ್ಲಿ ಹೊಸ ಅಧ್ಯಾಯವೊಂದು ಶುರುವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿಯೇ ಗೋಚರಿಸಿದೆ. ಇನ್ನುಳಿದಂತೆ ರಂಗಾಯಣ ರಘು ನಟನೆ ಎಂದಿನಂತೆ ಸೊಗಸಾಗಿದೆ. ನಾಯಕನ ತಾಯಿ ಸೇರಿದಂತೆ ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ. ರವಿಶಂಕರ್ ಗೌಡ ಕೂಡಾ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಭಾಗೀರಥಿ ಬಾಯಿ ಕದಂ ನಟನೆ ನಿಜಕ್ಕೂ ಅದ್ಭುತ.

ಒಟ್ಟಾರೆಯಾಗಿ ಮಿಸ್ಸಿಂಗ್ ಬಾಯ್ ಭಿನ್ನ ಪಥದ ಚಿತ್ರ. ತುಂಬಾ ಕಾಲದ ನಂತರ ಮನಮಿಡಿಯುವ ಕಥಾ ಹಂದರದ ವಿಶಿಷ್ಟ ಸಿನಿಮಾ ನೋಡಿದ ಅನುಭವಕ್ಕಾಗಿ ಒಮ್ಮೆ ಮಿಸ್ಸಿಂಗ್ ಬಾಯ್ ಚಿತ್ರವನ್ನು ನೋಡಲೇಬೇಕಿದೆ.

ರೇಟಿಂಗ್: 4/5

TAGGED:Guru NandanKolla PraveenMissing BoyRaghuramRangayana RaghuRavi Shankar Gowdaಕೊಲ್ಲ ಪ್ರವೀಣ್ಗುರು ನಂದನ್ಮಿಸ್ಸಿಂಗ್ ಬಾಯ್ರಂಗಾಯಣ ರಘುರಘುರಾಮ್ರವಿಶಂಕರ್ ಗೌಡ
Share This Article
Facebook Whatsapp Whatsapp Telegram

Cinema news

darshan vijayalakshmi
ದರ್ಶನ್‌ಗೆ ಬೆನ್ನುನೋವು ಇರೋದು ನಿಜ: ನಟನ ಬದುಕಿನ ಏಳುಬೀಳಿನ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮಾತು
Cinema Latest Sandalwood Top Stories
Ugram Manju
ಸರಳವಾಗಿ ಮದುವೆಯಾಗಲು ರೆಡಿಯಾದ ಉಗ್ರಂ ಮಂಜು
Cinema Latest Sandalwood Top Stories
Rakshita Shetty Dhruvanth Secret Room Fight
`ರಕ್ಷಿತಾ ಆರ್ ಕೂಡ ನೀವಲ್ಲ’- ರಕ್ಷಿತಾ ಧ್ರುವಂತ್ ಸಿಕ್ಕಾಪಟ್ಟೆ ಕಿತ್ತಾಟ!
Cinema Latest Sandalwood Top Stories TV Shows
Sai Pallavi
ಎಂ.ಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಸಾಯಿಪಲ್ಲವಿ ನಟನೆ ಫಿಕ್ಸ್‌
Bollywood Cinema Latest Top Stories

You Might Also Like

Crime

ಸೈಕಲ್‌ ಆಟವಾಡುತ್ತಾ ನೀರಿನ ಸಂಪ್‌ಗೆ ಬಿದ್ದು 4 ವರ್ಷದ ಬಾಲಕ ಸಾವು

Public TV
By Public TV
3 minutes ago
DK Shivakumar 5
Belgaum

ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ

Public TV
By Public TV
8 minutes ago
ELECTION COMMISSION OF INDIA
Latest

ಪ.ಬಂಗಾಳದಲ್ಲಿ SIR- 58 ಲಕ್ಷ ಮತದಾರರ ಹೆಸರುಗಳನ್ನು ಅಳಿಸಲು ಪ್ರಸ್ತಾಪ

Public TV
By Public TV
18 minutes ago
kea
Bengaluru City

ಇನ್ನೂ 26 ವೈದ್ಯಕೀಯ ಸೀಟು ಉಳಿಕೆ, ಯುಜಿ ವೈದ್ಯಕೀಯ-ಸ್ಟ್ರೇ ವೇಕೆನ್ಸಿ ಸುತ್ತಿನ ಅಂತಿಮ ಫಲಿತಾಂಶ ಪ್ರಕಟ: ಕೆಇಎ

Public TV
By Public TV
35 minutes ago
Kempegowda Airport Taxi Drivers Protest
Bengaluru City

ಹೊಸ ರೂಲ್ಸ್‌ಗೆ ವಿರೋಧ – ಏರ್ಪೋರ್ಟ್ ಅಥಾರಿಟಿ ವಿರುದ್ಧ ಸಿಡಿದೆದ್ದ ಟ್ಯಾಕ್ಸಿ ಚಾಲಕರು

Public TV
By Public TV
1 hour ago
aryan khan shilpa shetty
Bengaluru City

ಬೆಂಗಳೂರು| ಆರ್ಯನ್‌ ಖಾನ್‌ ಬಂದಿದ್ದ, ಶಿಲ್ಪಾ ಶೆಟ್ಟಿ ಒಡೆತನದ ಪಬ್‌ಗಳ ವಿರುದ್ಧ FIR

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?