ಭೋಪಾಲ್: ಪ್ರೀತಿ ಕುರುಡ ಅಂತಾರೆ ಅದು ನಿಜ. ಯಾಕೆಂದರೆ ನಿಜವಾದ ಪ್ರೀತಿಗೆ ಯಾವುದೇ ವಯಸ್ಸು, ಜಾತಿ, ಧರ್ಮ, ಅಂತಸ್ತಿನ ತಾರತಮ್ಯವಿಲ್ಲ. ಇದಕ್ಕೆ ಸಾಕ್ಷಿಯಂತೆ ರೆಡ್ ಲೈಟ್ ಏರಿಯಾದ ಹುಡುಗಿಯನ್ನು ಯುವಕ ಪ್ರೀತಿಸಿ ಮದುವೆಯಾಗಿದ್ದಾರೆ.
ಈ ಘಟನೆ ಮಧ್ಯಪ್ರದೇಶದ ನಿಜಾಮ್ ನಲ್ಲಿ ನಡೆದಿದೆ. ವರ ಆಕಾಶ್ ಮತ್ತು ವಧು ಭಾರತಿ ಪ್ರೀತಿ ಮಾಡಿ ಕೋರ್ಟ್ ನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Advertisement
ಘಟನೆಯ ವಿವಿರ:
ವರ ಆಕಾಶ್ ಮೊದಲಿನಿಂದಲೂ ವೇಶ್ಯಾವಾಟಿಕೆಯನ್ನು ವಿರೋಧಿಸುತ್ತಿದ್ದರು. 2017ರಲ್ಲಿ ಈ ವೇಶ್ಯಾವಾಟಿಕೆ ದಂಧೆಗೆ ಬಲಿಯಾಗಿದ್ದ 60 ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದರು. ಅಂದು ಆಕಾಶ್ಗೆ ಭಾರತಿ ಎಂಬ ಬಾಲಕಿಯ ಪರಿಚಯವಾಗಿತ್ತು. ಅಂದು 16 ವರ್ಷದ ಭಾರತಿ ನನ್ನ ತಾಯಿ ಬಲವಂತವಾಗಿ ನನ್ನನ್ನು ಶಾಲೆಗೆ ಕಳುಹಿಸದೇ ವೇಶ್ಯಾವಾಟಿಕೆಗೆ ನೂಕುತ್ತಿದ್ದಾಳೆ ಎಂದು ಆಕಾಶ್ ಎದುರು ಹೇಳಿಕೊಂಡಿದ್ದರು.
Advertisement
Advertisement
ಭಾರತಿ ನೋವನ್ನು ಆಲಿಸಿದ ಆಕಾಶ್, ಮನೆಯಿಂದ ಕೆರೆದುಕೊಂಡು ಬಂದು ಮಹಿಳಾ ಹಾಸ್ಟೆಲ್ನಲ್ಲಿ ಇರಿಸಿದ್ದರು. ಆದರೆ ಅಲ್ಲಿಗೂ ಬಂದ ಭಾರತಿ ತಾಯಿ ಮಗಳನ್ನು ಕರೆದುಕೊಂಡು ಹೋಗಿದ್ದಳು. ಕೊನೆಗೆ ಆಕಾಶ್ ಪೊಲೀಸರ ಸಹಾಯದಿಂದ ಭಾರತಿಯನ್ನು ರಕ್ಷಿಸಿ, ಅಧಿಕಾರಿಗಳ ಅನುಮತಿ ಪಡೆದು ಆಶ್ರಮದಲ್ಲಿರಿಸಿ ಓದಿಸುತ್ತಿದ್ರು.
Advertisement
ಭಾರತಿಗೆ 21 ವರ್ಷವಾಗುತ್ತಿದ್ದಂತೆ ಪೊಲೀಸರೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವ ದಂಪತಿ ಹೊಸ ಜೀವನ ಆರಂಭಿಸಿ ಸಂತೋಷದಿಂದ ಬಾಳುತ್ತಿದ್ದಾರೆ ಎಂದು ವರದಿಯಾಗಿದೆ.