ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೈಟೆನ್ಶನ್ ವೈಯರ್ ಗೆ ಮತ್ತೊಂದು ಜೀವ ಬಲಿಯಾಗಿದೆ. ಆರ್‍ಟಿ ನಗರದ ಚಾಮುಂಡಿ ನಗರದ ಚಿಂಗಮ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ.
Advertisement
ಗಾಳಿಪಟ ಬಿಡಲು ಹೋಗಿ ಹೈ ಟೆನ್ಶನ್ ವೈಯರ್ (High Tension Wire) ತಗುಲಿ 11 ವರ್ಷದ ಅಬೂಬಕ್ಕರ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಸೋಮವಾರ ಈ ಘಟನೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆ (Victoria Hospital) ಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಅಬೂಬಕ್ಕರ್ ಮೃತಪಟ್ಟಿದ್ದಾನೆ.
Advertisement
Advertisement
ಇದೇ ಜಾಗದಲ್ಲಿ ಈ ಹಿಂದೆ ನಾಲ್ವರು ಬಾಲಕರು ಹೈ ಟೆನ್ಶನ್ ವೈಯರ್ ಗೆ ಬಲಿಯಾಗಿದ್ದು, ಇದು ಐದನೇ ಘಟನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮನೆಯ ಮೇಲೆಯೇ ಹಾದು ಹೋಗಿರುವ ಹೈಟೆನ್ಶ್ ವೈಯರ್, ಟೆರೇಸ್ ಮೇಲಿಂದ ಕೈಗೆ ತಾಕುವಂತಿದೆ. ಇದನ್ನೂ ಓದಿ: ಕಾಮಾಕ್ಷಿ ಪಾಳ್ಯದಲ್ಲೊಂದು ವಿಚಿತ್ರ ಕೊಲೆ- ತಾನು ನಿಲ್ಲಿಸಿದ್ದ ಜಾಗದಲ್ಲಿ ಬಸ್ ನಿಲ್ಲಿಸಿದ್ದಕ್ಕೆ ಮರ್ಡರ್
Advertisement
ಹೈಟೆನ್ಶನ್ ವೈಯರ್ ಗಿಂತ ಮನೆಗಳು ಎತ್ತರದಲ್ಲಿವೆ. ಹೀಗಾಗಿ ವೈಯರ್‍ಗಳು ಮನೆಯ ಮೇಲೆ ಕೈಗೆ ತಾಕುವಂತಿವೆ. ಹೆನ್ಶನ್ ವೈಯರ್ ಹಾದು ಹೋದ ಜಾಗದಲ್ಲಿ ಪಾರ್ಕ್ ಕೂಡ ಇದೆ. ಈ ಪಾರ್ಕ್ ಗೆ ಬರೋ ಮಕ್ಕಳಿಗೆ, ವೃದ್ಧರಿಗೂ ಕಂಟಕ ಎದುರಾಗುವ ಸಾಧ್ಯತೆಗಳಿವೆ. ಘಟನೆ ನಡೆದ ಬಳಿಕವೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಬೆಸ್ಕಾಂ ಅಧಿಕಾರಿಗಳ ಮೇಲೆ ದೂರು ದಾಖಲಿಸಿಕೊಳ್ಳಲು, ಆರ್ ಟಿ ನಗರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಮಗುವಿನದ್ದೇ ತಪ್ಪು ಎಂದು ದೂರು ದಾಖಲಿಸಿಕೊಳ್ಳದೇ, ಪೋಷಕರನ್ನ ಬೈದು ಕಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k