ಅಗರ್ತಲಾ: ರಕ್ಷಾಬಂಧನದ ನಿಮಿತ್ತ ಗೆಳತಿಯರಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಶಿಕ್ಷಕಿ ಒತ್ತಾಯಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಾಲೆಯ ಕಟ್ಟಡದಿಂದ ಹಾರಿದ ಘಟನೆ ತ್ರಿಪುರಾದ ಅಗರ್ತಲಾದಲ್ಲಿ ನಡೆದಿದೆ.
ದಿಲೀಪ್ ಕುಮಾರ್(18) ಸಹಾ ಶಾಲೆಯ ಕಟ್ಟದಿಂದ ಹಾರಿದ ವಿದ್ಯಾರ್ಥಿ. ರಕ್ಷಾ ಬಂಧನದ ನಂತರದ ದಿನವಾದ ಸೋಮವಾರ ದಿಲೀಪ್ ಪ್ರೀತಿಸುತ್ತಿದ್ದ ಗೆಳತಿಯ ಪೋಷಕರು ಶಾಲೆಗೆ ಬಂದಿದ್ದರು. ಅವರು ತಮ್ಮ ಮಗಳಿಂದ ದಿಲೀಪ್ ರಾಖಿ ಕಟ್ಟಿಸಿ, ಇಬ್ಬರು ಅಣ್ಣ ತಂಗಿಯಂತೆ ಇರಬೇಕೆಂದು ಶಿಕ್ಷಕರಿಗೆ ತಿಳಿಸಿದ್ದರು ಎಂದು ವರದಿಯಾಗಿದೆ.
Advertisement
ದಿಲೀಪ್ ಗೆಳತಿಯ ಪೋಷಕರ ಮಾತು ಕೇಳಿದ ಶಾಲೆಯ ಪ್ರಾಚಾರ್ಯರ ಹಾಗೂ ಕೆಲವು ಶಿಕ್ಷಕರು ರಾಖಿ ಕಟ್ಟಿಸಲು ನಿರ್ಧರಿಸಿದ್ದರು. ಆದರೆ ಶಿಕ್ಷಕರೂ ಎಷ್ಟೇ ತಿಳಿಸಿ ಹೇಳಿದರೂ ದಿಲೀಪ್ ಹಾಗೂ ಆತನ ಗೆಳತಿ ಒಪ್ಪಲಿಲ್ಲ. ಆದರೆ ಬಲವಂತವಾಗಿ ಕೆಲವು ಶಿಕ್ಷಕರು ರಾಖಿ ಕಟ್ಟಿಸಲು ಮುಂದಾದಾಗ ದಿಲೀಪ್ ಶಾಲೆಯ ಎರಡನೇ ಮಹಡಿಯಿಂದ ಹಾರಿದ್ದಾನೆ. ಅದೃಷ್ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಆತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಶಾಲೆಯ ಶಿಕ್ಷಕರ ನಡೆಯನ್ನು ಖಂಡಿಸಿ, ದಿಲೀಪ್ ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv