ಬೀಜಿಂಗ್: 3 ವರ್ಷದಿಂದ ಬಾಲಕನೊಬ್ಬ ತನ್ನ ಅನಾರೋಗ್ಯ ಗೆಳೆಯನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ಸುದ್ದಿವೊಂದು ಚೀನಾದಲ್ಲಿ ಬೆಳಕಿಗೆ ಬಂದಿದ್ದು, ಈಗ ವೈರಲ್ ಆಗುತ್ತಿದೆ.
ಕ್ಸು (Xu) ಹಾಗೂ ಜಾಂಗ್ (Zhaang) ಇಬ್ಬರು ಆತ್ಮೀಯ ಗೆಳೆಯರಾಗಿದ್ದು, 6ನೇ ತರಗತಿಯಲ್ಲಿ ಓದುತ್ತಿದ್ದಾರೆ. ಜಾಂಗ್ ಗೆ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಆತನ ಗೆಳೆಯ ಕ್ಸು 3 ವರ್ಷದಿಂದ ತನ್ನ ಸ್ನೇಹಿತನನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾನೆ.
ಜಾಂಗ್ ನಾಲ್ಕು ವರ್ಷವಿದ್ದಾಗ ರ‍್ಯಾಗ್ ಡಾಲ್ ಕಾಯಿಲೆಗೆ ತುತ್ತಾಗಿದ್ದನು. ಈ ಕಾಯಿಲೆ ಇದ್ದರೆ ನಡೆದಾಡಲು ಸಮಸ್ಯೆ ಆಗುತ್ತದೆ. ಜಾಂಗ್ ಗೆ ಈ ಕಾಯಿಲೆ ಇದ್ದ ಕಾರಣ ಆತನ ಗೆಳೆಯ ಕ್ಸುನನ್ನು ದಿನನಿತ್ಯ ಹೆಗಲ ಮೇಲೆ ಹೊತ್ತುಕೊಂಡು ಶಾಲೆಗೆ ಹೋಗುತ್ತಿದ್ದನು.
ನನ್ನ ಸ್ನೇಹಿತನಿಗೆ ಸಹಾಯ ಮಾಡುವುದಕ್ಕೆ ನನಗೆ ಯಾವುದೇ ಸಮಸ್ಯೆ ಇಲ್ಲ. ನಾನು 40 ಕೆಜಿ ತೂಕ ಇದ್ದೇನೆ ಹಾಗೂ ನನ್ನ ಸ್ನೇಹಿತ ಜಾಂಗ್ 25 ಕೆಜಿ ತೂಕ ಇದ್ದಾನೆ. ಹಾಗಾಗಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಎಂದು ಕ್ಸು ಹೇಳಿದ್ದಾನೆ.
ಅಲ್ಲದೆ ನಾವಿಬ್ಬರು ಆತ್ಮೀಯ ಸ್ನೇಹಿತರು. ನಾವು ಒಟ್ಟಿಗೆ ಕೂತು ಓದುತ್ತೇವೆ. ನಾವು ಒಟ್ಟಿಗೆ ಮಾತನಾಡುತ್ತೇವೆ ಹಾಗೂ ಜೊತೆಯಲ್ಲೇ ಆಟವಾಡುತ್ತೇವೆ ಎಂದು ಕ್ಸು ತನ್ನ ಗೆಳೆಯನದ ಬಗ್ಗೆ ಮಾತನಾಡಿದ್ದಾನೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]