ಮಡಿಕೇರಿ: ಆ ಬಾಲಕ ಸದಾ ಓದಿನಲ್ಲಿ ಮುಂದೆ ಇದ್ದ. ಎಲ್ಲಾ ಗೆಳೆಯರೊಂದಿಗೆ ಆಟ ಪಾಠ ಕ್ರೀಡೆ ಸೇರಿದಂತೆ ಎಲ್ಲದರಲ್ಲೂ ಚಟುವಟಿಕೆಗಳಿಂದ ಇರುತ್ತಿದ್ದ. ಅಂದು ದೀಪಾವಳಿ ಹಬ್ಬ ಇರುವುದರಿಂದ ಹಾಸ್ಟೆಲ್ ನಿಂದ ನೇರವಾಗಿ ತನ್ನ ಮನೆಗೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬ ರಜೆ ಮುಗಿಸಿಕೊಂಡು ಹೊರಟಿದ್ದ. ಇದೀಗ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.
ಇತ್ತ ಮಗ ಕಾಣೆಯಾಗಿ ಒಂದು ತಿಂಗಳು ಕಳೆದರೂ ಸುಳಿವು ಇಲ್ಲ ಎಂದು ಬಾಲಕನ ತಾಯಿ ತನ್ನ ಮಗನ ಫೋಟೋ ಇಡಿದುಕೊಂಡು ಊರು ಊರು, ಬೀದಿ ಬೀದಿ ಅಲೆಯುತ್ತಾ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ.
ಮಗನಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಮನದಾಸೆಯಿಂದ ಕೊಡಗಿನ ಗೋಣಿಕೋಪ್ಪದಿಂದ ದೂರದ ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಋು ತಾಯಿ. ಆತನ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಲು ಹತ್ತಾರು ಕನಸುಗಳನ್ನು ಕಂಡಿದ್ದಳು. ತನ್ನ ಒಬ್ಬನೇ ಮಗನನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದ ತಾಯಿ ಪ್ರತಿನಿತ್ಯ ಮಗನೊಂದಿಗೆ ಮಾತನಾಡುತ್ತಾ ತನ್ನ ಜೀವನವನ್ನು ಕಳೆಯುತ್ತಿದ್ದಳು.
ಕಳೆದ ದೀಪಾವಳಿ ರಜೆಯಂದು ಕಾಲೇಜಿನಿಂದ ಆಗಮಿಸಿದ್ದ. ಮಗ ತಾಯಿಯೊಂದಿಗೆ ದೀಪಾವಳಿ ಹಬ್ಬ ಖುಷಿ ಖುಷಿಯಿಂದಲೇ ಆಚರಿಸಿ ಸಂಭ್ರಮಿಸಿದ್ದ. ದೀಪಾವಳಿ ರಜೆ ಮುಗಿಯುತ್ತಿದ್ದಂತೆಯೇ ಎಂದಿನಂತೆ ಕಾಲೇಜಿನ ಹಾಸ್ಟೆಲ್‌ಗೆ ತೆರಳಲು ಮಗ ಅಣಿಯಾಗಿದ್ದ ಹೆತ್ತ ತಾಯಿ ತನ್ನ ಮಗನಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಬ್ಯಾಗಿಗೆ ತುಂಬಿ ಮಗನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿ ಬಸ್ ಹತ್ತಿಸಿದ್ದಳು ಅಷ್ಟೇ.. ಮಗ ಬಸ್ಸಿನಲ್ಲಿ ಹೋದವನು 2-3 ದಿನ ಕಳೆದ್ರು ಹಾಸ್ಟೆಲ್‌ಗೂ ತಲುಪದೇ ಎಲ್ಲಿ ಹೋಗಿದನ್ನೋ ಗೋತ್ತಿಲ್ಲದೇ ಬಾಲಕ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ಹೀಗಾಗಿ ದೀಕ್ಷಿತ್ (17) ತಾಯಿ ಗೋಣಿಕೋಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಪ್ರತಿನಿತ್ಯ ಒಂದಲ್ಲ ಒಂದು ಊರಿಗೆ ತೆರಳಿ ಮಗನಿಗಾಗಿ ನಿತ್ಯ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನೂ ಕಾಲೇಜು ವಿದ್ಯಾರ್ಥಿ ದೀಕ್ಷಿತ್ ಕಾಣೆಯಾದ ಬಗ್ಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವಕನ ಶೋಧ ಕಾರ್ಯಕ್ಕೆ ಪೋಲಿಸರ 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರ ತಂಡವು ಈಗಾಗಲೇ ಮಂಗಳೂರಿನ ಕಾಲೇಜು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಹೊಟೇಲ್, ಲಾಡ್ಜ್, ಬೀಚ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಿದೆ.