ಮುಂಬೈ: ಮೆಡಿಕಲ್ ಪರೀಕ್ಷೆಯಲ್ಲಿ ನಾನು ಫೇಲ್ ಆಗಿದ್ದಕ್ಕೆ ನನ್ನ ಗೆಳತಿಯೇ ಕಾರಣ. ಈಗ ಆಕೆ ನನ್ನ ಫೀಸ್ ಭರಿಸಬೇಕು ಎಂದು ಹಠ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ಔರಂಗಬಾದ್‍ನಲ್ಲಿ ನಡೆದಿದೆ.
ಬೀಡ್ ಜಿಲ್ಲೆ ಮೂಲದ 21 ವರ್ಷದ ವಿದ್ಯಾರ್ಥಿ ಹೋಮಿಯೋಪಥಿ ಹಾಗೂ ಸರ್ಜರಿ ಓದುತ್ತಿದ್ದನು. ವಿದ್ಯಾರ್ಥಿ ಮೊದಲ ವರ್ಷದಲ್ಲಿ ಫೇಲ್ ಆಗಿದ್ದನು. ಅಲ್ಲದೆ ಮೊದಲ ವರ್ಷದಲ್ಲಿ ಖರ್ಚಾದ ಹಣವನ್ನು ಪಾವತಿಸಲು ಆತ ತನ್ನ ಪ್ರೇಯಸಿಗೆ ಒತ್ತಾಯಿಸಿದ್ದಾನೆ.
ವಿದ್ಯಾರ್ಥಿ ಔರಂಗಾಬಾದ್‍ನ ಕಾಲೇಜ್‍ವೊಂದರಲ್ಲಿ ನಾಲ್ಕು ವರ್ಷದ ಬಿಎಚ್‍ಎಂಎಸ್(ಹೋಮಿಯೋಪಥಿ) ಕೋರ್ಸ್‍ಗೆ ಅಡ್ಮಿಶನ್ ಮಾಡಿಸಿದ್ದ. ಅದೇ ತರಗತಿಯಲ್ಲಿ ಆತನ ಪ್ರೇಯಸಿ ಕೂಡ ಓದುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೀತಿ ಆರಂಭವಾಗಿದೆ.
ನನ್ನ ಪ್ರೇಯಸಿಯ ಕಾರಣ ನನಗೆ ಸರಿಯಾಗಿ ಓದಲು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮೊದಲ ವರ್ಷದಲ್ಲಿ ಫೇಲ್ ಆಗಿದ್ದೇನೆ. ನಾನು ಫೇಲ್ ಆಗಿದ್ದರಿಂದ ನನಗೆ ಮುಂದಿನ ವರ್ಷಕ್ಕೆ ಆಡ್ಮಿಶನ್ ದೊರೆತಿಲ್ಲ. ನಾನು ಪರೀಕ್ಷೆಯಲ್ಲಿ ಫೇಲಾದ ಕಾರಣ ಆಕೆಯ ಫೋಷಕರು ಆಕೆಗೆ ನೀಡಿದ್ದ ಫೀಸ್ ನನಗೆ ಕಟ್ಟಬೇಕು ಎಂದು ಹಠ ಹಿಡಿದಿದ್ದಾನೆ.
ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕನ ಪ್ರೇಯಸಿ ಆತನಿಂದ ದೂರ ಹೋಗಿದ್ದಾಳೆ. ಪ್ರೇಯಸಿ ದೂರ ಆಗುತ್ತಿರುವುದನ್ನು ನೋಡಿ ಯುವಕ ಆಕೆಗೆ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಬಳಿಕ ತನ್ನ ಪ್ರೇಯಸಿ ಮೋಸ ಮಾಡಿದ್ದಾಳೆ ಎನ್ನುವ ವಿಚಾರ ಆತನಿಗೆ ಗೊತ್ತಾಗಿದೆ.
ಪ್ರೇಯಸಿ ಮೋಸ ಮಾಡಿದ್ದಕ್ಕೆ ಕೋಪದಿಂದ ಯುವಕ ಆಕೆಯ ಬಗ್ಗೆ ಹಾಗೂ ಆಕೆಯ ಕುಟುಂಬದ ಬಗ್ಗೆ ಕೆಟ್ಟದಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅಲ್ಲದೆ ಫೀಸ್ ಹಣ ನೀಡಲಿಲ್ಲ ಎಂದರೆ ಯುವತಿ ಜೊತೆಯಿರುವ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.