ಉಡುಪಿ: ಈಜುಕೊಳದಲ್ಲಿ (Swimming Pool) ಮುಳುಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಕುಂದಾಪುರದ (Kundapura) ಹೆಂಗವಳ್ಳಿ ಸಮೀಪದ ರೆಸಾರ್ಟ್‍ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಅರೀಝ್ (9) ಎಂದು ಗರುರುತಿಸಲಾಗಿದೆ. ಹೂಡೆ ಮೂಲದ ಕುಟುಂಬ ಪ್ರವಾಸಕ್ಕೆ ಇಲ್ಲಿನ ರೆಸಾರ್ಟ್‍ಗೆ ಬಂದಿತ್ತು. ಈ ವೇಳೆ ಅರೀಝ್ ಹಾಗೂ ಆತನ ಕುಟುಂಬ ಈಜುಕೊಳದಲ್ಲಿ ಆಟವಾಡುವಾಗ ಈ ದುರ್ಘಟನೆ ಸಂಭವಿಸಿದೆ. ಸ್ವಲ್ಪ ಸಮಯ ನೀರಿನಲ್ಲಿ ಆಟವಾಡಿದ್ದ ಅರೀಝ್‍ಗೆ ಬಳಿಕ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.
- Advertisement -
- Advertisement -
ಕೊಡಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಅಝೀಝ್ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.
- Advertisement -
- Advertisement -
ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಕುಟುಂಬ ಆರೋಪಿಸಿದೆ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.