ಯಾದಗಿರಿ: ಖಾಸಗಿ ಶಾಲಾ ಬಸ್ ಹರಿದು 4ರ ಬಾಲಕ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಗುರುಮಠಕಲ್ (Gurumathkal) ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ.
ಪುನೀತ್ (4) ಮೃತ ದುರ್ದೈವಿ ಬಾಲಕ. ಗಾಜರಕೋಟ್ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುರ್ಚಿ ಕದನ ಹೊತ್ತಲ್ಲೇ ಟೂರ್ ಪಾಲಿಟಿಕ್ಸ್ – ವಿದೇಶಕ್ಕೆ ಯಾರ್‍ಯಾರು ಹೋಗ್ತಿದ್ದಾರೆ?
ಗ್ರಾಮದ ವಿದ್ಯಾರ್ಥಿಗಳನ್ನು ಶಾಲಾ ಬಸ್ ಪ್ರತಿನಿತ್ಯ ಸ್ಕೂಲ್‌ಗೆ ಕರೆದೊಯ್ದು ತಂದು ಬಿಡಲಾಗುತ್ತಿತ್ತು. ಅದರಂತೆ ಇಂದು ಕೂಡ ಬಸ್ ವಿದ್ಯಾರ್ಥಿಗಳನ್ನು ಬಿಡಲು ಗ್ರಾಮಕ್ಕೆ ಬಂದಿತ್ತು. ಬಾಲಕ ಬಸ್ಸಿನಿಂದ ಇಳಿದ ಬಳಿಕ ಬಸ್ ರಿವರ್ಸ್ ತೆಗೆದುಕೊಳ್ಳಲು ಮುಂದಾಗಿತ್ತು. ಈ ವೇಳೆ ಹಿಂದೆ ನೋಡದೇ ಚಾಲಕ ರಿವರ್ಸ್ ತೆಗೆದುಕೊಂಡಿದ್ದು, ಬಾಲಕನ ಮೇಲೆ ಹರಿದಿದೆ. ಪರಿಣಾಮ ಬಾಲಕ ಸಾವನ್ನಪ್ಪಿದ್ದಾನೆ.
ಗ್ರಾಮದಲ್ಲಿ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗುರುಮಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: Car Diplomacy| ಮ್ಯಾಕ್ರನ್ ಜೊತೆ ಕಾರಿನಲ್ಲಿ ಮೋದಿ ಮಾತುಕತೆ

