ಕಾರವಾರ: ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ (Swimming pool) ಬಿದ್ದು ಮಗು ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ಜಾಲಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಭಟ್ಕಳದ ಮೌಲವಿ ಶಾಹಿದುಲ್ಲಾಹ ಎಂಬವರ ಪುತ್ರ ಮೊಹಮ್ಮದ್ ಮುಸ್ತಾಕೀಮ್ ಶೇಖ್ (5) ಎಂದು ಗುರುತಿಸಲಾಗಿದೆ. ಕುಟುಂಬದವರ ಜೊತೆ ಆಟವಾಡುತ್ತಿದ್ದಾಗ ಮಗು ಕಾಲುಜಾರಿ ಈಜುಕೊಳಕ್ಕೆ ಬಿದ್ದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇದನ್ನೂ ಓದಿ: ಅತ್ಯಾಚಾರಕ್ಕೆ ತಂದೆಯಿಂದಲೇ ಕುಮ್ಮಕ್ಕು – ಪೋಕ್ಸೋ ಪ್ರಕರಣ ದಾಖಲು
ಶಾಹಿದುಲ್ಲಾಹ ಹೋಮ್ ಸ್ಟೇ ಮನೆಯನ್ನು ಲೀಸ್‍ಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊಲೆ ಆರೋಪಿಗೆ ಆಶ್ರಯ ನೀಡಿದ್ದ ಕಾಂಗ್ರೆಸ್ ನಾಯಕಿ ಅರೆಸ್ಟ್

