ಮುಂಬೈ: ಗಾಳಿಪಟ ಹಾರಿಸಲು ಹೋಗಿ 16 ವರ್ಷದ ಬಾಲಕನೊಬ್ಬ ಕಟ್ಟಡದ ಟೆರೆಸ್ ಮೇಲಿನಿಂದ ಬಿದ್ದ ಪರಿಣಾಮ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ.
ಈ ಘಟನೆ ನಾಸಿಕ್‍ನ ಜೈಲ್ ರೋಡ್ ಬಳಿ ಮಂಗಳವಾರ ನಡೆದಿದ್ದು, ಸುಫಿಯಾನ್ ನಿಜಾಮ್ ಖುರೇಶಿ ಮೃತ ಬಾಲಕ. ಖುರೇಶಿ ಹಾಗೂ ಇತರ ಸ್ನೇಹಿತರು ಕಟ್ಟಡದ ಟೆರೆಸ್ ಮೇಲೆ ಹೋಗಿ ಗಾಳಿಪಟವನ್ನು ಹಾರಿಸುತ್ತಿದ್ದರು.
ಈ ವೇಳೆ ಮೃತ ಖುರೇಶಿ ಗಾಳಿಪಟ ಹಾರಿಸುತ್ತಿದ್ದ ಖುಷಿಯಲ್ಲಿ ಟೆರೆಸ್ ಮೇಲೆ ತುದಿಗೆ ಹೋಗಿದ್ದು, ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಎತ್ತರದ ಕಟ್ಟಡದಿಂದ ಬಿದ್ದ ಪರಿಣಾಮ ಕುರೇಶಿ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು, ತಕ್ಷಣ ಆತನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಷ್ಟರಲ್ಲೇ ಖುರೇಶಿ ಮೃತಪಟ್ಟಿದ್ದನು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ಖುರೇಶಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಾಸಿಕ್‍ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ನಾಶಿಕ್ ರೋಡ್ ಪೊಲೀಸರು ಹೇಳಿದ್ದಾರೆ.
ಈ ಘಟನೆ ನಾಸಿಕ್ ರೋಡ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv