ಮಂಡ್ಯ: ಈಜಾಡಲು (Swimming) ಹೋಗಿ ಕೃಷಿ ಹೊಂಡದಲ್ಲಿ (Agricultural Pit) ಮುಳುಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (Malavalli) ತಾಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದ ಶಿವಣ್ಣ ಅವರ ಪುತ್ರ ಪೃಥ್ವಿನ್ (15) ಮೃತ ಬಾಲಕ. ದಳವಾಯಿ ಕೋಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಶಾಲೆಗೆ ರಜೆ ಇದ್ದ ಕಾರಣ ತನ್ನ 4 ಮಂದಿ ಸ್ನೇಹಿತರೊಂದಿಗೆ ಭಾನುವಾರ ಮಧ್ಯಾಹ್ನ ಈಜಾಡಲು ತೆರಳಿದ್ದ. ಇದನ್ನೂ ಓದಿ: ಇರಾನ್ ಯುದ್ಧ – 5 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್
ಭಾನುವಾರ ಸಂಜೆಯವರೆಗೂ ಮನೆಗೆ ಬಾಲಕ ಹಿಂದಿರುಗಿರಲಿಲ್ಲ. ಬಳಿಕ ಆತ ಕೃಷಿ ಹೊಂಡದಲ್ಲಿ ಈಜಲು ಹೊಗಿದ್ದ ಎಂದು ತಿಳಿದಿದೆ. ನಂತರ ಪೋಷಕರು ಬಾಲಕನ ಪತ್ತೆಗಾಗಿ ಶೋಧ ನಡೆಸಿದ್ದರು. ನಂದೀಪುರ ಗ್ರಾಮದ ರಾಜೇಗೌಡ ಅವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಇಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತುಮಕೂರು, ಮೈಸೂರು ಸೇರಿ 15 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ – ಎಲ್ಲಿ, ಯಾವಾಗ?

