ರಾಯಚೂರು: ಜಿಲ್ಲೆಯಲ್ಲಿ ಬೀದಿ ನಾಯಿಗಳ (Stary Dogs) ಹಾವಳಿ ಹೆಚ್ಚಾಗಿದ್ದು, ಜಿಲ್ಲೆಯ ಎರಡು ಕಡೆ ಬೀದಿ ನಾಯಿಗಳು ಬಾಲಕ ಹಾಗೂ ಬಾಲಕಿ ಮೇಲೆ ದಾಳಿ ಮಾಡಿವೆ. ಲಿಂಗಸುಗೂರು (Lingasuguru) ತಾಲೂಕಿನ ಕಸಬಾ ಲಿಂಗಸುಗೂರು ಗ್ರಾಮದಲ್ಲಿ ಬೀದಿ ನಾಯಿ ದಾಳಿಗೆ 6 ವರ್ಷದ ಬಾಲಕ ಸಿದ್ದಪ್ಪ ಬಲಿಯಾಗಿದ್ದಾನೆ.
ಶನಿವಾರ ಸಂಜೆ ಬಹಿರ್ದೆಸೆಗೆ ಹೋದಾಗ ಬೀದಿನಾಯಿಗಳ ಹಿಂಡು ದಾಳಿ ಮಾಡಿದೆ. ನಾಯಿಗಳ ದಾಳಿಯಿಂದ ಮೈತುಂಬ ಗಂಭೀರ ಗಾಯಗಳಾಗಿವೆ. ಪೋಷಕರು ಕೂಡಲೇ ಬಾಲಕನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು-ಗುವಾಹಟಿ ಕಾಮಾಕ್ಯ ಎಕ್ಸ್‌ಪ್ರೆಸ್
ಇನ್ನೂ ರಾಯಚೂರು ತಾಲೂಕಿನ ಮರ್ಚೆಟಾಳ ಗ್ರಾಮದಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿ ಬಾಲಕಿಗೆ ಗಂಭೀರ ಗಾಯಗೊಳಿಸಿವೆ. 9 ವರ್ಷದ ಬಾಲಕಿ ಚೈತ್ರ ಮೇಲೆ ನಾಯಿ ದಾಳಿ ನಡೆಸಿದೆ. ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಶ್ವಾನ ತಲೆ, ಕಿವಿ, ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಬಾಲಕಿಯನ್ನ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಹಾಕಿದ್ದಕ್ಕೆ ಹಲ್ಲೆ ಆರೋಪ – ಆರೋಪಿಗಳು ಎಸ್ಕೇಪ್