ಬೆಂಗಳೂರು: ಖಾಸಗಿ ಶಾಲೆಯ ಬಸ್ಸಿಗೆ ಸರ್ಕಾರಿ ವಿದ್ಯಾರ್ಥಿ ಬಲಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬುಧವಾರ ಸ್ಕೂಲ್ (School) ಗೆ ಬರಬೇಕಾದರೆ ಈ ಘಟನೆ ನಡೆದಿದೆ. ಅವನ ಮುಖವನ್ನು ಸತ್ತ ಮೇಲೆನೇ ನೋಡಿರೋದು. ದೊಡ್ಡ ಮಗ ಇವನೇ ಇವನು ಇನ್ನ ನಮ್ಮ ಮನೆಗೆ ವಾಪಸ್ ಬರ್ತಾನಾ ಅಂತಾ ಅಜ್ಜಿ ಪರಿಮಳಾ ಕಣ್ಣೀರು ಹಾಕಿದ್ದಾರೆ.
Advertisement
ಸ್ಕೂಲ್ ಒಳಗಡೆ ಬಂದು ಕುಸಿದು ಬಿದ್ನಾ ಅಥವಾ ರಸ್ತೆಯಲ್ಲಿ ಬಿದ್ನಾ ಏನೂ ಹೇಳ್ತಿಲ್ಲ. ಯಾರು ಕೂಡ ಸರಿಯಾಗಿ ಹೇಳ್ತಿಲ್ಲ. ಚಿಕ್ಕ ವಯಸ್ಸು ಹೋಗೋ ವಯಸ್ಸಾ ಸರ್ ಅವನು. ಮೂರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಉಳಿಯಲಿಲ್ಲ ಅಂತಾ ಪರಿಮಳಾ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
Advertisement
Advertisement
ಈ ಸಂಬಂಧ ಸರ್ಕಾರಿ ಶಾಲೆಯ ಪ್ರಭಾರಿ ಪ್ರಿನ್ಸಿಪಾಲ್ (Principal) ಸುಜಾತ ಪ್ರತಿಕ್ರಿಯಿಸಿ, ಸ್ಕೂಲ್ ಒಳಗಡೆ ಬಂದು ಕುಸಿದು ಬಿದ್ದರು ಅಂತಾ ಅನ್ನೋದು ಸುಳ್ಳು. ಘಟನೆ ಆದ ಮೇಲೆ ಸ್ಕೂಲ್ ಒಳಗಡೆ ಯಾರೋ ಕರೆದುಕೊಂಡು ಬಂದರು. ಕೂಡಲೇ ನಮ್ಮ ಟೀಚರ್ ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಮೂರು ಆಸ್ಪತ್ರೆ ಸುತ್ತಾಡಿದರೂ ಉಳಿಯಲಿಲ್ಲ. ರಾಯನ್ ಸ್ಕೂಲ್ ಬಸ್ ಅಂತಾ ಹೇಳ್ತಾ ಇದ್ದಾರೆ. ನಾವು ಅಲ್ಲಿಯ ಮ್ಯಾನೇಜ್ಮೆಂಟ್‍ಗೆ ಕಾಲ್ ಮಾಡಿ ಮಾತಾಡಿದ್ದೇವೆ. ಆದರೆ ಅವರು ನಮ್ಮದು ಅಲ್ಲ ಅಂತಾ ಹೇಳಿದ್ರು. ರಸ್ತೆಯಲ್ಲಿ ದಾಟಬೇಕಾದ್ರೆ ಘಟನೆ ಆಗಿದೆ ಎಂದು ತಿಳಿಸಿದ್ದಾರೆ.
Advertisement
ಸದ್ಯ ಮುನೇನಕೊಳಲು ಮೃತ ವಿದ್ಯಾರ್ಥಿ ನಿವಾಸದ ಬಳಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದೇಹದ ಮುಂದೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ತಾಯಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಮೃತ ವಿದ್ಯಾರ್ಥಿ ದೊಡ್ಡವನು ಇನ್ನೊಬ್ಬ ಮಗ ಅವರ ಗಂಡನ ಹತ್ತಿರ ಇರುವುದಾಗಿ ತಿಳಿದು ಬಂದಿದೆ.