ದಿಸ್ಪುರ್: ತಾಯಿಯ ಪ್ರಿಯತಮನಿಂದ 10 ವರ್ಷದ ಮಗ ಕೊಲೆಯಾಗಿರುವ ಘಟನೆ ಆಸ್ಸಾಂನ (Assam) ಗುವಾಹಟಿಯಲ್ಲಿ (Guwahati) ನಡೆದಿದೆ.
ಆರೋಪಿಯನ್ನು ಜಿತುಮೋನಿ ಹಲೋಯ್ ಎಂದು ತಿಳಿಯಲಾಗಿದ್ದು, ಮೃತ ಬಾಲಕನ ದೇಹ ಸೂಟ್‌ಕೇಸ್‌ವೊಂದರಲ್ಲಿ ಪತ್ತೆಯಾಗಿದೆ.ಇದನ್ನೂ ಓದಿ: ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್.ವಿ ದೇಶಪಾಂಡೆ
ಕಳೆದ ಶನಿವಾರ ತನ್ನ ಮಗ ಟ್ಯೂಷನ್‌ನಿಂದ ಮನೆಗೆ ಬಂದಿಲ್ಲ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಗುವಾಹಟಿಯ ಪೊದೆಯೊಂದರ ಬಳಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತ ಬಾಲಕನ ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ತನ್ನ ಪತಿಯಿಂದ ಬೇರ್ಪಟ್ಟು ಆರೋಪಿ ಜಿತುಮೋನಿ ಹಲೋಯ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದುಬಂದಿದೆ.
ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿ, ಸೂಟ್‌ಕೇಸ್ ಪತ್ತೆಯಾದ ಸ್ಥಳಕ್ಕೆ ಕರೆದುಕೊಂಡು ಹೋದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಮೃತ ಬಾಲಕನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಯಲ್ಲಿ ಆಕೆಯ ಪಾತ್ರವಿದೆಯಾ ಎಂದು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಮಹಿಳೆಯಿಂದ ಬೇರ್ಪಟ್ಟಿರುವ ಪತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನತೆಯಿಂದ ಬಂದ್ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ