ಮೆಲ್ಬರ್ನ್: ಆಸೀಸ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧ ಶತಕ (75 ರನ್) ಸಿಡಿಸಿ ಆಸೀಸ್ ನೆಲದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದ ಮಯಾಂಕ್ ಟೀಂ ಇಂಡಿಯಾದ 295 ಆಟಗಾರನಾಗಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆದರು. ಬಳಿಕ ಪಂದ್ಯದಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 75 ರನ್ ಸಿಡಿಸಿ ಆಸೀಸ್ ಸರಣಿಗೆ ತಮ್ಮನ್ನು ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಉಳಿದಂತೆ 1947 ಡಿಸೆಂಬರ್ ನಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ದತ್ತು ಫಾಡ್ಕರ್ 51 ರನ್ ಸಿಡಿಸಿದ್ದರು.
Advertisement
Mayank Agarwal played some classy shots in his debut knock in Test cricket!#AUSvIND | @MastercardAU pic.twitter.com/G9RRHBICTW
— cricket.com.au (@cricketcomau) December 26, 2018
Advertisement
ಮೊದಲ ದಿನದಾಟದ ಅಂತ್ಯಕ್ಕೆ ಮಯಾಂಕ್ 76 ರನ್, ಪೂಜಾರಾ 68* ರನ್, ಕೊಹ್ಲಿ 47* ರನ್‍ಗಳ ನೆರವಿನಿಂದ 89 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 215 ರನ್ ಗಳಿಸಿದೆ.
Advertisement
ವಿದೇಶಿ ನೆಲದಲ್ಲಿ ನಡೆದ ಪಾದಾರ್ಪಣೆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ಗವಾಸ್ಕರ್ ರಂತಹ ದಿಗ್ಗಜರ ಸಾಲಿಗೂ ಕೂಡ ಮಯಾಂಕ್ ಸೇರಿದ್ದು, ಈ ಹಿಂದೆ ವಿದೇಶದಲ್ಲಿ ಪಾರ್ದಾಪಣೆ ಪಂದ್ಯದಲ್ಲಿ 1974 ಇಂಗ್ಲೆಂಡ್ ವಿರುದ್ಧ ಸುಧೀರ್ ನಾಯ್ಕ್ 75 ರನ್ ಸಿಡಿಸಿ ಮೊದಲ ಸಾಲಿನಲ್ಲಿದ್ದಾರೆ. ಸುನಿಲ್ ಗವಾಸ್ಕರ್ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 65 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.
Advertisement
Stumps on Day 1 of the 3rd Test.#TeamIndia on top with 215/2 (Pujara 68*, Virat 47*)
Scorecard – https://t.co/xZXZnUvzvk #AUSvIND pic.twitter.com/lxegdNaU5N
— BCCI (@BCCI) December 26, 2018
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಪರ ಮಯಾಂಕ್, ಹನುಮ ವಿಹಾರಿ ಯುವ ಜೋಡಿ ಕಣಕ್ಕೆ ಇಳಿದು ಉತ್ತಮ ಆರಂಭ ನೀಡಿತು. ಇಬ್ಬರ ಜೋಡಿ ಮೊದಲ ವಿಕೆಟ್‍ಗೆ 40 ರನ್ ಗಳಿಸಿದ್ದ ವೇಳೆ ವಿಹಾರಿ, ಕಮ್ಮಿನ್ಸ್‍ಗೆ ವಿಕೆಟ್ ಒಪ್ಪಿಸಿದರು. ಆರಂಭಿಕನಾಗಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ವಿಹಾರಿ 66 ಎಸೆತಗಳಲ್ಲಿ 8 ರನ್ ಗಳಿಸಿದರು.
ಈ ಹಂತದಲ್ಲಿ ಆರಂಭಿಕ ಮಯಾಂಕ್‍ರನ್ನು ಕೂಡಿಕೊಂಡ ಅನುಭವಿ ಆಟಗಾರ ಪೂಜಾರ ತಂಡವನ್ನು ಉತ್ತಮ ಮೊತ್ತದತ್ತ ಕೊಂಡ್ಯೊಯಲು ಮುಂದಾದರು. ಇತ್ತ ಮಯಾಂಕ್ ತಮ್ಮ ಅಕ್ರಮಣಕಾರಿ ಆಟ ಮುಂದುವರೆಸಿದರು. 95 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಮಯಾಂಕ್ ಜವಾಬ್ದಾರಿಯುತ ಆಟವಾಡಿದರು. ಈ ಇಬ್ಬರ ಜೋಡಿ 2ನೇ ವಿಕೆಟ್‍ಗೆ 83 ರನ್ ಜೊತೆಯಾಟ ನೀಡಿತು. ಈ ಜೋಡಿಯನ್ನು ಬೇರ್ಪಡಿಸಿದ ಕಮ್ಮಿನ್ಸ್ ಟೀ ಇಂಡಿಯಾಗೆ 2ನೇ ಹೊಡೆತ ನೀಡಿದರು. ಇದನ್ನು ಓದಿ: ಮೂರನೇ ಪಂದ್ಯಕ್ಕೆ ಇತ್ತಂಡಗಳು ರೆಡಿ- `ಬಾಕ್ಸಿಂಗ್ ಡೇ’ ಟೆಸ್ಟ್ ಕರೆಯೋದು ಯಾಕೆ?
ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ, ಪೂಜಾರರೊಂದಿಗೆ ಸೇರಿ ತಂಡ ರನ್ ಹೆಚ್ಚಿಸಲು ಕಾರಣರಾದರು. ಮೊದಲ ದಿನದಾಟದ ಅಂತ್ಯಕ್ಕೆ 200 ಎಸೆತಗಳಲ್ಲಿ 68 ರನ್ ಗಳಿಸಿದ ಪೂಜಾರ ಹಾಗೂ 107 ಎಸೆತಗಳಲ್ಲಿ 47 ರನ್ ಗಳಿಸಿರುವ ಕೊಹ್ಲಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ. ಆಸೀಸ್ ಪರ ಕಮ್ಮಿನ್ಸ್ 2 ವಿಕೆಟ್ ಪಡೆದರು.
A special moment for @mayankcricket who is all set to make his debut at the MCG ???????????????????? #TeamIndia #AUSvIND pic.twitter.com/r0J0eD9rXz
— BCCI (@BCCI) December 25, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv