ಕೋಲ್ಕತ್ತಾ: ಅಭ್ಯಾಸದ ವೇಳೆ 20 ವರ್ಷದ ಬಾಕ್ಸರ್ ಕುಸಿದು ಬಿದ್ದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬಾವಾನಿಪುರದಲ್ಲಿ ನಡೆದಿದೆ.
ಜ್ಯೋತಿ ಪ್ರಧಾನ್ ಮೃತಪಟ್ಟ ಬಾಕ್ಸರ್. ಜ್ಯೋತಿ ಕಿಡ್ಡರ್ ಪುರ ಪ್ರದೇಶದ ಭೂಕೈಲಾಶ್‍ನ ನಿವಾಸಿಯಾಗಿದ್ದು, ಜೋಗೇಶ್ ಚಂದ್ರ ಚೌಧರಿ ಕಾನೂನು ಕಾಲೇಜಿನಲ್ಲಿ ಪದವಿ ಓದುತ್ತಿದ್ದರು. ಜ್ಯೋತಿ ರಾಷ್ಟ್ರೀಯ ಟೂರ್ನಿಮೆಂಟ್‍ನಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದರು.
Advertisement
Advertisement
ಬುಧವಾರ ಜ್ಯೋತಿ ಭವಾನಿಪುರದ ಬಾಕ್ಸಿಂಗ್ ಅಸೋಸಿಯೇಶನ್‍ನಲ್ಲಿ ಬಾಕ್ಸಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಜ್ಯೋತಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಹತ್ತಿರದ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement
ಈ ಘಟನೆ ಬಗ್ಗೆ ಹತ್ತಿರದ ಪೊಲೀಸ್ ಠಾಣೆಯ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಸದ್ಯ ಜ್ಯೋತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ನಾವು ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಬಳಿಕ ಸಾವಿನ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.