ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಕರ್ನಾಟಕ ಮಾತ್ರವಲ್ಲ ದೇಶದ ಮೂಲೆ ಮೂಲೆಯಲ್ಲೂ ಈ ಚಿತ್ರದ್ದೇ ಹವಾ. ಬಾಲಿವುಡ್‌ನಲ್ಲಿ ಮಾತ್ರ ಕೋಟಿ ಕೋಟಿ ಲೂಟಿ ಮಾಡ್ತಿರೋದಲ್ಲ ಮಾಲಿವುಡ್‌ನಲ್ಲೂ ಭಾರೀ ಸೌಂಡ್ ಮಾಡುತ್ತಿದೆ. ಕೇರಳದಲ್ಲಿ `ಕೆಜಿಎಫ್ 2′ ಮೂರನೇ ಸ್ಥಾನದಲ್ಲಿದೆ.
ಇಡೀ ದೇಶವೇ ರಾಕಿಭಾಯ್ ನಟನೆ ನೋಡಿ ಜೈಕಾರ ಹಾಕ್ತಿದ್ದಾರೆ. ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ರೆ, ವರ್ಲ್ಡ್ ವೈಡ್ `ಕೆಜಿಎಫ್ 2′ ಚಿತ್ರ 1000ಕ್ಕೂ ಅಧಿಕ ಕೋಟಿ ಲೂಟಿ ಮಾಡಿದೆ. ಎಲ್ಲಾ ವುಡ್‌ನಲ್ಲೂ ಸೌಂಡ್ ಮಾಡ್ತಿರೋ ಯಶ್ ಚಿತ್ರ ಕೇರಳದಲ್ಲೂ 28 ದಿನಗಳಲ್ಲಿ 64.50 ಕಲೆಕ್ಷನ್ ಮಾಡಿದೆ. ಮಾಲಿವುಡ್‌ನಲ್ಲಿ ಯಶ್ ಚಿತ್ರ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಕೇರಳದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರೋ ಸಿನಿಮಾಗಳೆಂದರೆ ಮೋಹನ್‌ಲಾಲ್ ನಟನೆಯ `ಪುಲಿಮುರುಗನ್’ 78.50 ಕೋಟಿ ಕಲೆಕ್ಷನ್ ಮಾಡಿ, ಟಾಪ್ ಒನ್ ಸ್ಥಾನದಲ್ಲಿದೆ. `ಬಾಹುಬಲಿ 2′ 73.20 ಕಲೆಕ್ಷನ್ ಮಾಡಿ, ಟಾಪ್ 2ರ ಸ್ಥಾನ ಗಿಟ್ಟಿಸಿಕೊಂಡ್ರೆ, `ಕೆಜಿಎಫ್ 2′ ಸಿನಿಮಾ 64.50 ಕಲೆಕ್ಷನ್ ಮಾಡಿ ಮೂರನೇ ಸ್ಥಾನದಲ್ಲಿದೆ. ನಂತರ `ಲೂಸಿಫರ್’ ಮತ್ತು `ಭೀಷ್ಮ ಪರ್ವಂ’ ಚಿತ್ರಗಳಿವೆ. ಇದನ್ನೂ ಓದಿ: ಪುನೀತ್‌ಗಾಗಿ ಬರೆದ ಕಥೆಯಲ್ಲಿ ನಟ ವಿರಾಟ ನಟಿಸುತ್ತಾರಾ: ದಿನಕರ್ ತೂಗುದೀಪ್ ಸ್ಪಷ್ಟನೆ
ದೇಶವ್ಯಾಪ್ತಿ ಸೌಂಡ್ ಮಾಡ್ತಿರೋ ಚಿತ್ರ ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಎಲ್ಲಾ ಚಿತ್ರರಂಗದಲ್ಲೂ ಕಲೆಕ್ಷನ್ ವಿಚಾರದಲ್ಲಿ ಸಂಚಲನ ಸೃಷ್ಟಿಸಿದೆ. ರಿಲೀಸ್ ಆಗಿ 28 ದಿನಗಳು ಕಳೆದರು ಥಿಯೇಟರ್‌ನತ್ತ ಸಿನಿಪ್ರೇಕ್ಷಕರ ಗಮನ ಸೆಳೆಯುವಲ್ಲಿ `ಕೆಜಿಎಫ್ 2′ ಯಶಸ್ವಿಯಾಗಿದೆ.