ಬೆಂಗಳೂರು: ಮಂತ್ರಿ ಮಾಲ್ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈ ಅವಘಡದ ನೆನಪು ಮಾಸುವ ಮುನ್ನವೇ ಪ್ರತಿಷ್ಠಿತ ಬೌರಿಂಗ್ ಆಸ್ಪತ್ರೆ ಕುಸಿಯಲು ತಯಾರಾಗಿ ನಿಂತಂತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಒದಗಿಸೋ ಬೌರಿಂಗ್ ಆಸ್ಪತ್ರೆ ಈಗ ಜನರ ಪ್ರಾಣ ನುಂಗಲು ರೆಡಿಯಾಗಿದೆ.
2006ರಲ್ಲಿ ಉದ್ಘಾಟನೆಗೊಂಡ ಬೌರಿಂಗ್ ಆಸ್ಪತ್ರೆಗೆ ದಿನನಿತ್ಯ ನೂರಾರು ಜನ ಚಿಕಿತ್ಸೆಗಾಗಿ ಹೋಗ್ತಾರೆ. ಯಾವುದೇ ಅಪಘಾತಗಳಾದ್ರೂ ಕೂಡ ಇದೇ ಆಸ್ಪತ್ರೆಗೆ ಮೊದಲು ಕರೆತರಲಾಗುತ್ತೆ. ಆದ್ರೆ ಇದೀಗ ರೋಗಿಗಳು ಬೌರಿಂಗ್ ಆಸ್ಪತ್ರೆಗೆ ಬರಲು ಭಯಬೀಳುವಂತಾಗಿದೆ. ಇದಕ್ಕೆ ಕಾರಣ ಆಸ್ಪತ್ರೆ ಪೂರ್ತಿ ಬಿರುಕು ಬಿಟ್ಟಿರೋದು.
Advertisement
Advertisement
ಸಿಲಿಕಾನ್ ಸಿಟಿ ಮಾತ್ರವಲ್ಲ ಬೇರೆ ಊರುಗಳಿಂದ ಕೂಡ ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರ್ತಾರೆ. ಆದ್ರೆ ಆಸ್ಪತ್ರೆ ಗೋಡೆಗಳು ಮಾತ್ರ ಪೂರ್ತಿ ಬಿರುಕು ಬಿಟ್ಟಿದ್ದು ಜೀವ ಭಯದಿಂದ ಓಡಾಡುವಂತಾಗಿದೆ. ಅದ್ರಲ್ಲೂ ತುರ್ತು ಚಿಕಿತ್ಸೆ ಹಾಗೂ ಮಕ್ಕಳ ವಾರ್ಡ್ ಇದಾಗಿದ್ದು, ರೋಗಿಗಳು ಇನ್ನೂ ಭಯ ಬೀಳುವಂತಾಗಿದೆ. ಬಡರೋಗಿಗಳ ಆಸ್ಪತ್ರೆಗೆ ಫಿಲ್ಟರ್ ಮರಳು ಬಳಸಲಾಗಿದೆ. ಹೀಗಾಗಿ ಗೋಡೆಗಳಿ ಬಿರುಕು ಬಿಟ್ಟಿದೆ ಎಂದು ಸ್ಥಳೀಯರಾದ ಬಸವರಾಜ್ ಆರೋಪಿಸಿದ್ದಾರೆ.
Advertisement
Advertisement
ಒಂದೆಡೆ ಗೋಡೆ ಬಿರುಕು ಬಿಟ್ಟಿದ್ರೆ, ಇನ್ನೊಂದೆಡೆ ನೀರಿನ ಪೂರೈಕೆಗೆ ಅಳವಡಿಸಿರುವ ಪೈಪ್ ಸೋರಿಕೆಯಾಗ್ತಿದೆ. ಹೀಗಾಗಿ ಮೇಲಿನ ಅಂತಸ್ತಿಂದ ಕೆಳ ಮಹಡಿವರೆಗೂ ನೀರಿನ ಸೋರಿಕೆಯಾಗ್ತಿದ್ದು, ಗೋಡೆ ಇನ್ನಷ್ಟು ಬಿರುಕು ಬಿಡ್ತಿದೆ. ಈ ಬಗ್ಗೆ ಆಸ್ಪತ್ರೆಯ ಡಿನ್ ಡಾ. ಮಂಜುನಾಥ್‍ನ ಕೇಳಿದ್ರೆ, ಆ ರೀತಿ ಏನು ಇಲ್ಲ. ನನ್ನ ಗಮನಕ್ಕೆ ಅದು ಬಂದಿಲ್ಲ. ಅಲ್ಲಿ ನೀರಿನ ಪೈಪ್‍ಗಳು ಒಡೆದಿದೆ. ಅದನ್ನ ಸರಿ ಪಡಿಸೋ ಕೆಲಸ ಮಾಡ್ತಿದ್ದೇವೆ. ಅದ್ರಿಂದ ಗೋಡೆ ಬಿರುಕು ಬಿಟ್ಟಿರಬಹುದು. ಎಲ್ಲವನ್ನ ಸರಿಮಾಡ್ತಿವಿ ಅಂತ ಪ್ರತಿಕ್ರಿಯಿಸಿದ್ದಾರೆ.