ಸೆಂಚೂರಿಯನ್: ಯುವ ಸ್ಪಿನ್ನರ್ ಯಜುವೇಂದ್ರ ಚಹಲ್ ದಕ್ಷಿಣ ಆಫ್ರಿಕಾ ವಿರುದ ನಡೆದ ಎರಡನೇ ಟಿ20 ಕ್ರಿಕೆಟ್ ನಲ್ಲಿ ಕೆಟ್ಟ ಸಾಧನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ನಾಲ್ಕು ಓವರ್ ಗಳಲ್ಲಿ ಮೇಡನ್ ಮತ್ತು ಯಾವುದೇ ವಿಕೆಟ್ ಪಡೆಯದೇ 64 ರನ್ ಬಿಟ್ಟುಕೊಡುವ ಮೂಲಕ ಚಹಲ್ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಟೀಂ ಇಂಡಿಯಾದ ಬೌಲರ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
Advertisement
4 ಓವರ್ ಗಳಲ್ಲಿ ಯಾವುದೇ ಮೇಡನ್ ಮಾಡದೇ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಬೌಲರ್ ಗಳ ಪೈಕಿ ಜೋಗಿಂದರ್ ಶರ್ಮಾ ಎರಡನೇ ಸ್ಥಾನದಲ್ಲಿದ್ದರೆ, ಯೂಸೂಫ್ ಪಠಾಣ್ ಮೂರನೇ ಸ್ಥಾನ ಪಡೆದಿದ್ದಾರೆ. ಜೋಗಿಂದರ್ ಶರ್ಮಾ 57 ರನ್ ನೀಡಿದ್ದರೆ, ಯೂಸೂಫ್ ಪಠಾಣ್ 54 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ 53 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ.
Advertisement
ವಿಶೇಷ ಏನೆಂದರೆ ಭಾರತದ ಪರ ಟಿ20 ಪಂದ್ಯ ಒಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಚಹಲ್ ಆಗಿದ್ದಾರೆ. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 25 ರನ್ ನೀಡಿ 6 ವಿಕೆಟ್ ಪಡೆದಿದ್ದರು.
Advertisement
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಗೆದ್ದ 6 ಪಂದ್ಯಗಳಲ್ಲಿ ಚಹಲ್ 14.56 ಸರಾಸರಿಯೊಂದಿಗೆ 16 ವಿಕೆಟ್ ಪಡೆದು 6 ಸಿಕ್ಸ್ ಕೊಟ್ಟಿದ್ದಾರೆ. ಭಾರತ ಸೋತ 2 ಪಂದ್ಯಗಳಲ್ಲಿ 132.00 ಸರಾಸರಿಯೊಂದಿಗೆ 1 ವಿಕೆಟ್ ಉರುಳಿಸಿ 13 ಸಿಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ಆ ಕಡೆ ಯಾಕೆ ನೋಡ್ತಿದ್ದಿ, ನನ್ನನ್ನು ನೋಡು – ಪಾಂಡೆ ವಿರುದ್ಧ ಕ್ಯಾಪ್ಟನ್ ಕೂಲ್ ಗರಂ
Advertisement