ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ (Tamil Nadu Premier League) ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಷೇಕ್ ತನ್ವರ್ (Abhishek Tanwar) ಒಂದೇ ಎಸೆತದಲ್ಲಿ 18 ರನ್ ಬಿಟ್ಟುಕೊಟ್ಟು ಅತ್ಯಂತ ಕೆಟ್ಟ ಸಾಧನೆ ಮಾಡಿದ್ದಾರೆ.
ಹೌದು, ತಮಿಳುನಾಡು ಪ್ರೀಮಿಯರ್ ಲೀಗ್‍ನ (TNPL) 7ನೇ ಆವೃತ್ತಿ ಅದ್ಧೂರಿ ಆರಂಭ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಚೆಪಾಕ್ ಗಿಲ್ಲೀಸ್ ಹಾಗೂ ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವಿನ 2ನೇ ಪಂದ್ಯದಲ್ಲಿ ಬೇಡದ ದಾಖಲೆಯೊಂದು ಸೃಷ್ಟಿಯಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‍ನ ಕೊನೆಯ ಎಸೆತದಲ್ಲಿ ಸೇಲಂ ಸ್ಪಾರ್ಟನ್ಸ್ ತಂಡದ ಬೌಲರ್ ಅಭಿಷೇಕ್ ತನ್ವರ್ 18 ರನ್ ಬಿಟ್ಟುಕೊಟ್ಟು ಕೆಟ್ಟ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ
Advertisement
ಒಂದೇ ಎಸೆತದಲ್ಲಿ 18 ರನ್ ಬಂದಿದ್ದು ಹೇಗೆ?
2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಕಣಕ್ಕಿಳಿದ ವೇಗಿ ಅಭಿಷೇಕ್ ಮೊದಲ 5 ಎಸೆತಗಳಲ್ಲಿ ಕೇವಲ 7 ರನ್‍ಗಳನ್ನು ಬಿಟ್ಟುಕೊಟ್ಟು ಉತ್ತಮವಾಗಿಯೇ ಬೌಲಿಂಗ್ ಮಾಡಿದ್ದರು. ಕೊನೆಯ ಎಸೆತವನ್ನ ಕೂಡ ಅಭಿಶೇಕ್ ಅದ್ಭುತ ಯಾರ್ಕರ್ ಎಸೆದು ಬ್ಯಾಟರ್ ಅನ್ನು ಬೌಲ್ಡ್ ಮಾಡಿದರು. ಆದರೆ ಅದು ನೋಬಾಲ್ ಎಂದು ಅಂಪೈರ್ ಘೋಷಿಸಿದರು. ನಂತರ ಮತ್ತೆ ಇನ್ನಿಂಗ್ಸ್‍ನ ಕೊನೆಯ ಎಸೆತವನ್ನು ಎಸೆದ ಅಭಿಷೇಕ್ ಎಸೆತವನ್ನು ಕ್ರೀಸ್‍ನಲ್ಲಿದ್ದ ಸಂಜಯ್ ಯಾದವ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದರು. ಅದು ಕೂಡ ನೋಬಾಲ್ ಎಂದು ಅಂಫೈರ್ ಘೋಷಿಸಿದರು. ನಂತರ ಎಸೆತ ಕೂಡ ನೋಬಾಲ್. ಆಗ ಎರಡು ರನ್‍ಗಳು ಎದುರಾಳಿ ತಂಡದ ಖಾತೆಗೆ ದೊರೆಯಿತು. 4ನೇ ಬಾರಿಗೆ ಕೊನೆಯ ಎಸೆತವನ್ನು ಎಸೆದಾಗ ಅದು ವೈಡ್ ಆಗಿ ಮತ್ತೊಂದು ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು. ಮುಂದಿನ ಪ್ರಯತ್ನದಲ್ಲಿ ಕೊನೆಗೂ ಲೀಗಲ್ ಎಸೆತ ಎಸೆದರು. ಆದ್ರೆ ಆ ಬಾಲ್‍ನ್ನೂ ಕ್ರೀಸ್‍ನಲ್ಲಿದ್ದ ಸಂಜಯ್ ಯಾದವ್ ಸಿಕ್ಸರ್‌ಗೆ ಅಟ್ಟಿದರು.
Advertisement
Advertisement
ಈ ಮೂಲಕ ಚೆಪಾಕ್ ಗಿಲ್ಲೀಸ್ ತಂಡ ಒಂದೇ ಎಸೆತದಲ್ಲಿ 18 ರನ್‍ಗಳನ್ನು ಕಲೆಹಾಕಿತು. ಈ ಕಾರಣದಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಚೆಪಾಕ್ ತಂಡ 5 ವಿಕೆಟ್ ಕಳೆದುಕೊಂಡು 217 ರನ್‍ಗಳ ಬೃಹತ್ ಮೊತ್ತ ಕಲೆಹಾಕಲು ಯಶಸ್ವಿಯಾಯಿತು. ಸಂಜಯ್ ಯಾದವ್ ಕೇವಲ 12 ಎಸೆತಗಳಲ್ಲಿ 31 ರನ್‍ಗಳನ್ನು ಗಳಿಸಿದರೆ ಆರಂಭಿಕ ಆಟಗಾರ ಪ್ರದೋಶ್ ಪೌಲ್ 55 ಎಸೆತಗಳಲ್ಲಿ 88 ರನ್‍ಗಳನ್ನು ಬಾರಿಸಿ ಅಬ್ಬರಿಸಿದರು.
Advertisement
ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್‍ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸೋಲೊಪ್ಪಿಕೊಂಡಿತು. ಮಹ್ಮದ್ ಅದ್ನಾನ್ ಖಾನ್ ಅಂತಿಮ ಹಂತದಲ್ಲಿ ಕೇವಲ 15 ಎಸೆತಗಳಲ್ಲಿ 47 ರನ್‍ಗಳಿಸಿದರಾದರೂ ಅದು ತಂಡದ ನೆರವಿಗೆ ಬರಲಿಲ್ಲ. ಉಳಿದ ಆಟಗಾರರು ನೀರಸ ಪ್ರದರ್ಶನ ನೀಡಿದ ಕಾರಣ ಚೆಪಾಕ್ ಗಿಲ್ಲೀಸ್ ವಿರುದ್ಧ ಸೋಲು ಅನುಭವಿಸಿತು. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ