ವೋಟ್ ಹಾಕೋಕೆ 2 ಕಿ.ಮೀ ನಡೆಯಬೇಕು – ಗ್ರಾಮದಲ್ಲಿ ಮತಗಟ್ಟೆ ತೆರೆಯಲು ಒತ್ತಾಯ

Public TV
1 Min Read
hassan poll booth

ಹಾಸನ: ಗ್ರಾಮದಲ್ಲಿ ಮತಗಟ್ಟೆ (Poll Booth) ತೆರೆಯುವಂತೆ ಒತ್ತಾಯಿಸಿ ಬೋವಿ ಕಾಲೋನಿ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹಾಸನ (Hassan) ಜಿಲ್ಲೆಯ ಬೇಲೂರು (Beluru) ತಾಲೂಕಿನ ಹಳೇಬೀಡು ಹೋಬಳಿಯ ಬೋವಿ ಕಾಲೋನಿ ಗ್ರಾಮಸ್ಥರು ಬೇಲೂರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ಗ್ರಾಮದಲ್ಲಿ 550 ಮತದಾರರಿದ್ದಾರೆ. ಮತದಾನ ಮಾಡಲು 2 ಕಿ.ಮೀ ದೂರದ ನರಸೀಪುರ ಗ್ರಾಮದಲ್ಲಿ ಮತ ಚಲಾವಣೆ ಮಾಡಬೇಕು ಎಂದರು. ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ – ಸ್ಥಳಕ್ಕೆ ಪೊಲೀಸರ ದೌಡು

hassan poll booth 2

ಗ್ರಾಮದಲ್ಲಿ ವಯೋವೃದ್ದರು, ಅನಾರೋಗ್ಯ ಪೀಡಿತರಿದ್ದಾರೆ. ಎರಡು ಕಿಲೋ ಮೀಟರ್ ಹೋಗಿ ಮತದಾನ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಬೋವಿ ಕಾಲೋನಿಯಲ್ಲಿಯೇ ಮತಗಟ್ಟೆ ತೆರೆಯಿರಿ. ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಚುನಾವಣಾ ಅಧಿಕಾರಿಗಳಿಂದ ರಾಜ್ಯಾದ್ಯಂತ 145 ಕೋಟಿ ರೂ. ನಗದು ಜಪ್ತಿ – ಯಾವ ಜಿಲ್ಲೆಯಲ್ಲಿ ಎಷ್ಟು ಸೀಜ್?

Share This Article