Connect with us

Latest

ರಾಹುಲ್ ಗಾಂಧಿ ಟ್ವಿಟ್ಟರ್ ಪಾಪ್ಯೂಲಾರಿಟಿ ಹಿಂದಿದೆಯಾ ನಕಲಿ ಖಾತೆ ಲಿಂಕ್?

Published

on

ನವದೆಹಲಿ: ಸಾಮಾಜಿಕ ಜಾಲತಾಣ ಟ್ವಟ್ಟರ್ ನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಾಪ್ಯೂಲಾರಿಟಿ ಪಡೆದುಕೊಂಡಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತ್ತು. ರಾಹುಲ್ ಅವರ ಈ ಧಿಡೀರ್ ಪ್ರಸಿದ್ಧಿಯ ಹಿಂದೆ ನಕಲಿ ಖಾತೆಗಳಿವೆ ಅನ್ನೋ ಆರೋಪ ಇದೀಗ ಕೇಳಿಬಂದಿದೆ.

ಈ ಕುರಿತು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಟ್ವಟ್ಟರ್ ನಲ್ಲಿ ರಾಹುಲ್ ಪ್ರಸಿದ್ಧಿ ಪಡೆಯಲು ವಿದೇಶಗಳಲ್ಲಿರುವ ನಕಲಿ ಖಾತೆಗಳೇ ಕಾರಣ ಎಂಬ ಅಂಶವನ್ನು ಬೆಳಕಿಗೆ ತಂದಿದೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿ ರಾಹುಲ್ ಗಾಂಧಿ ಅವರು ಹೆಚ್ಚು ರೀಟ್ವೀಟ್ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರಾಹುಲ್ ಗಾಂಧಿ ಅಮೆರಿಕಾಗೆ ತೆರಳಿದಾಗ ಡೊನಾಲ್ಡ್ ಟ್ರಂಪ್ ಕುರಿತ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ರಾಹುಲ್ ಅವರ ಟ್ವೀಟ್‍ಗೆ 20 ಸಾವಿರ ರೀ ಟ್ವೀಟ್‍ಗಳು ಬಂದಿದ್ದವು. ಹೀಗಾಗಿ ರಾಹುಲ್ ಟ್ವಿಟ್ಟರ್ ಪಾಪ್ಯುಲಾರಿಟಿಗೆ ನಕಲಿ ಖಾತೆಗಳೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ..

ಇನ್ನು ರಾಹುಲ್ ಗಾಂಧಿ ಅವರ ಪಾಪ್ಯೂಲಾರಿಟಿ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ರಾಹುಲ್ ಅವರು ರಷ್ಯಾ ಇಂಡೋನೆಷ್ಯಾ ಹಾಗೂ ಖಜಕಿಸ್ತಾನ್ ದೇಶಗಳಲ್ಲಿ ಚುನಾವಣೆಯನ್ನು ಗೆಲ್ಲುವ ಯೋಜನೆಯಲ್ಲಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ನಕಲಿ ರೀ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‍ನ ಡಿಜಿಟಲ್ ಟೀಮ್ ಮುಖ್ಯಸ್ಥೆ ರಮ್ಯಾ, ಇದೊಂದು ಆಧಾರ ರಹಿತ ಸುಳ್ಳು ಸುದ್ದಿ, ನೀವು (ಬಿಜೆಪಿ) ಇರುವುವಾಗ ಅಲ್ಲಿ ಬೇರೆಯವರ ಅವಶ್ಯಕತೆ ಏನಿದೆ ಎಂದು ತಿರುಗೇಟು ನೀಡಿದ್ದಾರೆ.

ಸ್ಮೃತಿ ಇರಾನಿ ಅವರ ಟ್ವೀಟ್‍ಗೆ ಬಿಜೆಪಿಯ ರಾಜವರ್ಧನ ರಾಥೋರ್ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಅವರ ಖಾತೆಗೆ ರೀಟ್ವೀಟ್ ಮಾಡಿರುವ ಹಲವು ವಿದೇಶಿ ಖಾತೆದಾರರ ಪೋಸ್ಟ್ ಗಳನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿದ್ದಾರೆ.

ಬಿಜೆಪಿಯ ಹಲವು ನಾಯಕರು ರಾಹುಲ್ ಅವರ ನಕಲಿ ಖಾತೆ ಪಾಪ್ಯೂಲಾರಿಟಿ ಕುರಿತು ಹಲವು ರೀತಿಯ ಟ್ವೀಟ್‍ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ : 2019ರಲ್ಲಿ ಮೋದಿ ಸೋಲಿಸಲು ರಾಹುಲ್ ಬಳಿಯಿದೆ ಮೆಗಾ ಬ್ರಹ್ಮಾಸ್ತ್ರ!

https://twitter.com/divyaspandana/status/921666883824132097

 

Click to comment

Leave a Reply

Your email address will not be published. Required fields are marked *