ನಾನ್ ವೆಜ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಜನರು ನೆಚ್ಚಿನ ಆಹಾರ ಸವಿಯಲು ಪ್ರತಿಷ್ಠಿಯ ಹೋಟೆಲ್‍ಗಳನ್ನೇ ಹುಡುಕಿಕೊಂಡು ಹೋಗ್ತಾರೆ. ಆದ್ರೆ ಇನ್ಮುಂದೆ ಹಾಗೇ ಮಾಡಬೇಕಾದ್ದೇ ಇಲ್ಲ. ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳನ್ನು ಸುಲಭವಾಗಿ ತಯಾರಿಸಿ ಮನೆಯಲ್ಲಿಯೇ ಸವಿಯಬಹುದಾಗಿದೆ. ಅದರಲ್ಲಿಯೂ ಬೋಟಿ ಗೊಜ್ಜು ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ. ಹೆಸರು ಹೇಳ್ತಿದ್ದಂತೆ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಮಿಲ್ಟ್ರಿ ಹೋಟೆಲ್‍ಗಳ ಮೆನುವಿನಲ್ಲಿ ಕಾಣ ಸಿಗುವ ಬೋಟಿ ಗೊಜ್ಜನ್ನು ಈಗ ಮನೆಯಲ್ಲಿಯೇ ಮಾಡಿ ಸವಿಯಬಹುದಾಗಿದೆ. ಅದನ್ನು ಮಾಡೋ ವಿಧಾನ ಹೇಗೆ ಎಂಬ ಚುಟುಕು ಮಾಹಿತಿ ಇಲ್ಲಿದೆ.
Advertisement
ಬೇಕಾಗಿರುವ ವಿಧಾನ:
* ಬೋಟಿ – 500 ಗ್ರಾಂ
* ತುರಿದ ತೆಂಗಿನಕಾಯಿ – 1 ಚಮಚ
* ಕೊತ್ತಂಬರಿ ಪುಡಿ – 1 ಚಮಚ
* ಅರಿಶಿನ ಪುಡಿ – ಅರ್ಧ ಚಮಚ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಗರಂ ಮಸಾಲಾ ಪುಡಿ – 2 ಚಮಚ
* ಎಣ್ಣೆ – 1 ಚಮಚ
Advertisement
* ಕೆಂಪು ಮೆಣಸಿನ ಪುಡಿ – 1 ಚಮಚ
* ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 1 ಕಪ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಲವಂಗ – 2
* ಏಲಕ್ಕಿ – 1
* ಚಿಕ್ಕ ಗಾತ್ರದ ದಾಲ್ಚಿನ್ನಿ – 1
* ಅಗತ್ಯವಿರುವಷ್ಟು ನೀರು
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ:
* ಬಿಸಿ ನೀರಿನಲ್ಲಿ ಬೋಟಿ ಸ್ವಚ್ಛಗೊಳಿಸಿ, ಕಟ್ ಮಾಡಿ. ಪಕ್ಕಕ್ಕೆ ಇಡಿ.
* ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ನಂತರ ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ ಬೀಜಗಳನ್ನು ಸೇರಿಸಿ ಫ್ರೈ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬೋಟಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ನೀರು ಹಾಕಿ ಬೇಯಿಸಿ.
* ಬೋಟಿ ಗೊಜ್ಜುಗೆ ಕೊತ್ತಂಬರಿ ಪುಡಿ, ತೆಂಗಿನಕಾಯಿ ತುರಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಕುದಿಸಿ.
– ಇದನ್ನು ಬಿಸಿ ಬಿಸಿ ಅನ್ನ, ಚಪಾತಿ, ರೋಟಿಯೊಂದಿಗೆ ಬಡಿಸಿ.