ಬಾಸ್ಟನ್: ಯುವತಿಯೋರ್ವಳು ಕೆಲವೇ ನಿಮಿಷಗಳಲ್ಲಿ ಕೋಟ್ಯಾಧಿಪತಿಯಾಗಿ, ತನ್ನ ಸಾಮಾನ್ಯ ಸ್ಥಿತಿಗೆ ಮರಳಿದ ವಿಚಿತ್ರ ಘಟನೆಯೊಂದು ಬಾಸ್ಟನ್‍ನಲ್ಲಿ ನಡೆದಿದೆ.
ಎಲೆನ್ ಫ್ಲೆಮಿಂಗ್ (26) ಎಂಬವರು ಕೋಟ್ಯಾಧಿಪತಿಯಾಗಿದ್ದ ಯುವತಿ. ಫ್ಲೆಮಿಂಗ್ ಗೆ ಬುಧವಾರ ಮಧ್ಯಾಹ್ನದ ವೇಳೆ ಟಿಡಿ ಅಮೆರಿಟ್ರೆಡ್ ಹಣಕಾಸು ಸಂಸ್ಥೆಯಿಂದ ಒಂದು ವಾಯ್ಸ್ ಮೇಲ್ ಬಂದಿದೆ. ಆ ಮೇಲ್‍ನಲ್ಲಿ 1.1 ಮಿಲಿಯನ್ ಡಾಲರ್ (ಸುಮಾರು 7.50 ಕೋಟಿ ರೂ.) ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಅಂತಾ ಹೇಳಲಾಗಿತ್ತು. ವಾಯ್ಸ್ ಮೇಲ್ ನಂಬಲಾಗದೇ ಫ್ಲೆಮಿಂಗ್ ತನ್ನ ಖಾತೆಯನ್ನು ಪರಿಶೀಲಿಸಿದ್ದಾರೆ. 50 ಡಾಲರ್ ಹಣ ಇದ್ದ ಖಾತೆಯಲ್ಲಿ 1.1 ಮಿಲಿಯನ್ ಡಾಲರ್ (ಸುಮಾರು 7.50 ಕೋಟಿ) ಹಣ ಜಮೆ ಆಗಿತ್ತು.
Advertisement
ಹಣ ಖಾತೆಗೆ ಜಮೆ ಆಗುತ್ತಿದ್ದಂತೆ ಯುವತಿ ತಾನು ಮಾಡುತ್ತಿರುವ ಕೆಲಸ ಬಿಟ್ಟು, ತನ್ನ ಶೈಕ್ಷಣಿಕ ಸಾಲ ತೀರಿಸುವ ಯೋಚನೆಯನ್ನು ತೊಡಗಿಕೊಂಡಿದ್ದಳು. ಅದೇ ವೇಳೆ ಮತ್ತೆ ಹಣಕಾಸು ಸಂಸ್ಥೆಯಿಂದ ಕರೆ ಬಂದು ಇಲ್ಲಿ ತಪ್ಪಾಗಿದೆ. ಅದು ನಿಮ್ಮ ಹಣವಲ್ಲ, ನಿಮ್ಮದೇ ಹೆಸರಿನ ಪ್ಲೋರಿಡಾದಲ್ಲಿ ಇರುವವರಿಗೆ ತಲುಪಬೇಕಾದದ್ದು ಎಂದು ಹೇಳಿ, ಹಣವನ್ನು ಹಿಂಪಡೆದಿದ್ದಾರೆ.
Advertisement
ಇದರಿಂದ ಬೇಸರಗೊಂಡ ಫ್ಲೆಮಿಂಗ್ ನಾನು ಕೇವಲ ಒಂದು ನಿಮಿಷಗಳಿಗೆ ಮಾತ್ರ ಕೋಟ್ಯಾಧಿಪತಿಯಾಗಿದ್ದೆ ಎಂದು ಹೇಳಿಕೊಳ್ಳಬಹುದು ಅಷ್ಟೇ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.