ಚೆನ್ನೈ: ಹುಟ್ಟಿದ್ದು ಭಾರತದಲ್ಲಿ, ನೆಲೆಸಿರುವುದು ಪಾಕಿಸ್ತಾನದಲ್ಲಿ. ಪಾಕ್ ಯುವತಿಗೆ ಭಾರತೀಯ ಹೃದಯವು ಮರುಜೀವ ನೀಡಿದೆ. ಆಸ್ಪತ್ರೆ ಮತ್ತು ವೈದ್ಯರು ಯುವತಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ಯುವತಿ ಆಯೇಶಾ ರಶನ್ (19). ಈಕೆ ಫ್ಯಾಷನ್ ವಿನ್ಯಾಸ ಕೋರ್ಸ್ ಅಧ್ಯಯನ ಮಾಡುತ್ತಿದ್ದಳು. ಯುವತಿಗೆ ಮರುಜೀವ ನೀಡಲು ಚೆನ್ನೈ ವೈದ್ಯರು ನೆರವಾಗಿದ್ದು ಗಮನಾರ್ಹ. ಇದನ್ನೂ ಓದಿ: ತನ್ನ ಮಾರ್ಕ್ಸ್ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು
ಹೃದಯ ಕಸಿಯಾದ ನಂತರ ನಾನು ಚೆನ್ನಾಗಿದ್ದೇನೆ ಎಂದು ರಶನ್ ಹೇಳಿದ್ದಾಳೆ. ಆಕೆಯ ತಾಯಿ ನೆರವು ನೀಡಿದ ವೈದ್ಯರು ಮತ್ತು ವೈದ್ಯಕೀಯ ಟ್ರಸ್ಟ್‌ಗೆ ಧನ್ಯವಾದ ತಿಳಿಸಿದ್ದಾರೆ. ರಶನ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಕೆ ಪಾಕಿಸ್ತಾನಕ್ಕೆ ಮರಳಬಹುದು ಎನ್ನಲಾಗಿದೆ.
ರಶನ್ ಹೃದಯಕ್ಕೆ ಸಂಬಂಧಿಸಿ ಗಂಭೀರ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಳು. ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಆಕೆಯನ್ನು ECMO ನಲ್ಲಿ ಇರಿಸಲಾಯಿತು. ಹೃದಯ ಅಥವಾ ಶ್ವಾಸಕೋಶದ ಕಾರ್ಯಚಟುವಟಿಕೆ ಮೇಲೆ ಪರಿಣಾಮ ಬೀರುವ ಮಾರಣಾಂತಿಕ ಅನಾರೋಗ್ಯಕ್ಕೆ ತುತ್ತಾದವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದಾಗಿದೆ. ಈ ಚಿಕಿತ್ಸೆ ಸಹಕಾರಿಯಾಗಲಿಲ್ಲ. ಆಕೆಗೆ ಪೂರ್ಣ ಹೃದಯ ಕಸಿ ಅಗತ್ಯವೆನಿಸಿತು ಎಂದು ವೈದ್ಯರು ತಿಳಿಸಿದ್ದರು. ಇದನ್ನೂ ಓದಿ: ಸುಪ್ರೀಂ ಚಾಟಿ ಬೆನ್ನಲ್ಲೇ ದೊಡ್ಡ ಗಾತ್ರದಲ್ಲಿ ಪ್ರಕಟಿಸಿ ಕ್ಷಮೆ ಕೋರಿದ ಪತಂಜಲಿ
ಹೃದಯ ಕಸಿಗೆ 35 ಲಕ್ಷಕ್ಕೂ ಹೆಚ್ಚು ವೆಚ್ಚವಾಗಬಹುದು ಎನ್ನಲಾಗಿತ್ತು. ಅಷ್ಟು ಹಣ ಭರಿಸುವುದು ಮನೆಯವರಿಗೆ ಕಷ್ಟ ಎನ್ನುವಂತಾಗಿತ್ತು. ಈ ಸಂದರ್ಭದಲ್ಲೇ ದೆಹಲಿ ಮೂಲದವರಿಂದ ಹೃದಯ ದಾನವಾಗಿ ಬಂತು. ಯುವತಿ ಅದೃಷ್ಟಶಾಲಿ ಎಂದು ಹೃದಯ ಮತ್ತು ಶ್ವಾಸಕೋಶ ಕಸಿ ಸಂಸ್ಥೆಯ ನಿರ್ದೇಶಕ ಡಾ. ಸುರೇಶ್ ರಾವ್ ಮಾಹಿತಿ ಹಂಚಿಕೊಂಡಿದ್ದಾರೆ.