ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ(ಸಿಐಎಸ್‍ಎಫ್) ಸೇವೆ ಸಲ್ಲಿಸಿದ್ದ 7 ಶ್ವಾನಗಳು ಮಂಗಳವಾರ ನಿವೃತ್ತಿ ಪಡೆದಿದೆ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಈ ಶ್ವಾನಗಳಿಗೆ ಸೇನಾ ಗೌರವದೊಂದಿಗೆ ವಿದಾಯ ನೀಡಲಾಯ್ತು.
ಮಂಗಳವಾರದಂದು ನಡೆದ ವಿದಾಯ ಕೂಟ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ನಿವೃತ್ತಿಯಾದ ಯೋಧನಿಗೆ ಗೌರವ ಸಲ್ಲಿಸಿ ಬೀಳ್ಕೊಡುವ ರೀತಿ ಶ್ವಾನಗಳಿಗೂ ಗೌರವದಿಂದ ನಿವೃತ್ತಿ ನೀಡಲಾಯ್ತು. ಮಂಗಳವಾರ ಈ ಶ್ವಾನಗಳ ಸೇವೆಯ ಕೊನೆಯ ದಿನವಾದರಿಂದ ಅವುಗಳಿಗೆ ಸೆಲ್ಯೂಟ್ ಹೊಡೆದು, ಸೇನಾ ಗೌರವದೊಂದಿಗೆ ಸೈನಿಕನಂತೆ ಬೀಳ್ಕೊಡಲಾಯ್ತು. ಇದನ್ನೂ ಓದಿ:ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ
Advertisement
Advertisement
ಸಿಐಎಸ್‍ಎಫ್ ತನ್ನ ತಂಡದಲ್ಲಿ ಸೇವೆ ಸಲ್ಲಿಸಿದ್ದ ಶ್ವಾನಗಳ ನಿವೃತ್ತಿ ಕುರಿತಾಗಿ ಟ್ವೀಟ್ ಮಾಡಿ, ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’ ಎಂದು ಬರೆದು, ಕಾರ್ಯಕ್ರಮದ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
Advertisement
ಕೆ9 ಹೀರೋಗಳಿಗೆ ವಿದಾಯ ನೀಡಿದ್ದೇವೆ. ಜೆಸ್ಸಿ(ಜಿಎಸ್‍ಡಿ/ಎಫ್), ಲಕ್ಕಿ(ಲ್ಯಾಬ್/ಎಫ್) ಮತ್ತು ಲವ್ಲಿ(ಲ್ಯಾಬ್/ಎಫ್) ಅಧಿಕೃತವಾಗಿ ನಿವೃತ್ತಿ ಹೊಂದಿವೆ. ದೆಹಲಿ ಮೆಟ್ರೋ ವಿಭಾಗದಲ್ಲಿ ಈ ಶ್ವಾಗಳ ನಿಸ್ವಾರ್ಥ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವುಗಳನ್ನು ನಾವು ನೆನಪಿಸಿಕೊಳ್ಳುತ್ತಿರುತ್ತೇವೆ ಎಂದು ಸಿಐಎಸ್‍ಎಫ್ ಟ್ವೀಟ್ ಮಾಡಿದೆ.
Advertisement
Born as a dog, retired as a soldier…
A Farewell ceremony for 07 #K9 members of #CISF organised @ CISF Unit DMRC Delhi. They were handed over to NGO @Friendicoes_DEL, New Delhi. Thank you for your services ! pic.twitter.com/3h1fREZz5s
— CISF (@CISFHQrs) November 19, 2019
ನಿವೃತ್ತಗೊಂಡ ಶ್ವಾನಗಳು ದೆಹಲಿ ಮೆಟ್ರೋ ವಿಭಾಗದ ಸಿಐಎಸ್‍ಎಫ್ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಹಾಗೆಯೇ ಪ್ಯಾರಾ ಮಿಲಿಟರಿ ಪಡೆಯಲ್ಲೂ ಸೇವಿಸಲ್ಲಿಸಿದ್ದವು. ಸತತ 8 ವರ್ಷಗಳ ಕಾಲ ಈ ಶ್ವಾನಗಳು ದೇಶಕ್ಕಾಗಿ ಸೇವೆ ಸಲ್ಲಿಸಿವೆ. ಹೀಗಾಗಿ ಸಮಾರಂಭದಲ್ಲಿ ಶ್ವಾನಗಳಿಗೆ ಸ್ಮರಣಿಕೆ, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೀತಿಯಿಂದ ಗೌರವಿಸಲಾಯಿತು.
#CISF bids farewell to our K9 heroes- Jessy (GSD/F), Lucky (Lab/F) & Lovely (Lab/F) who officially retired from duty today. We will always remain indebted for contributing immensely in security of Delhi Metro. pic.twitter.com/tn5T3wfbKZ
— CISF (@CISFHQrs) November 19, 2019
ಅದರಲ್ಲೂ ಇದೇ ಮೊದಲ ಬಾರಿಗೆ ಸೇನಾ ವಿಭಾಗವೊಂದು ಶ್ವಾನಗಳ ನಿವೃತ್ತಿಗಾಗಿ ಇಂತಹ ವಿಶೇಷ ಹಾಗೂ ಅದ್ಧೂರಿ ವಿದಾಯ ಕೂಟ ಕಾರ್ಯಕ್ರಮ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಕಾರ್ಯಕ್ರಮದ ನಂತರ ಈ ಶ್ವಾನಗಳನ್ನು ಎನ್‍ಜಿಒ ಒಂದಕ್ಕೆ ಒಪ್ಪಿಸಲಾಯ್ತು.