LatestLeading NewsMain PostNational

ಗುಜರಾತ್‌ನಲ್ಲಿ ಜೆಸಿಬಿ ಕಾರ್ಖಾನೆ ಓಪನ್‌ – ಬ್ರಿಟನ್‌ ಪ್ರಧಾನಿ ಚಾಲನೆ

ಗಾಂಧೀನಗರ: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಜೆಸಿಬಿಯ ಹೊಸ ರಫ್ತು-ಕೇಂದ್ರಿತ ಕಾರ್ಖಾನೆಯನ್ನು ವಡೋದರಾ ಬಳಿಯ ಹಲೋಲ್‌ನಲ್ಲಿ ಉದ್ಘಾಟಿಸಿದರು.

ಗುಜರಾತ್‌ನಲ್ಲಿ ಸುಮಾರು 990 ಕೋಟಿ ರೂ. ಹೂಡಿಕೆಯಲ್ಲಿ ಸ್ಥಾಪಿಸಲಾದ ಕಾರ್ಖಾನೆಯು ಜಾಗತಿಕ ಉತ್ಪಾದನಾ ಮಾರ್ಗಗಳಿಗೆ ಬಿಡಿಭಾಗಗಳನ್ನು ತಯಾರಿಸುತ್ತದೆ. 47 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಹೊಸ ಕಾರ್ಖಾನೆಯು ವಾರ್ಷಿಕವಾಗಿ 85,000 ಟನ್ ಉಕ್ಕನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

ಭಾರತ ದೇಶವು ಈಗ ಪ್ರಮುಖ ಇಂಜಿನಿಯರಿಂಗ್ ಶಕ್ತಿಯಾಗಿದೆ. ಇದು ಅಸಾಧಾರಣ ಯಶಸ್ಸನ್ನು ಹೊಂದಿದೆ. ಬೆಳವಣಿಗೆಗೆ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಅಂತಹ ಪ್ರಗತಿಯು ನಿರಂತರ ಹೂಡಿಕೆಯಿಂದ ಮಾತ್ರ ಸಾಧ್ಯ. ಗುಜರಾತ್‌ನಲ್ಲಿ ಹೊಸ ಸೌಲಭ್ಯವೊಂದನ್ನು ಕಲ್ಪಿಸಲಾಗಿದೆ. ಪ್ರಪಂಚದಾದ್ಯಂತ ನಮ್ಮ ವ್ಯಾಪಾರವನ್ನು ಬೆಳೆಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ಜೆಸಿಬಿ ಕಾರ್ಖಾನೆ ಅಧ್ಯಕ್ಷ ಲಾರ್ಡ್ ಬ್ಯಾಮ್‌ಫೋರ್ಡ್ ಅಭಿಪ್ರಾಯಪಟ್ಟಿದ್ದಾರೆ.

ಇದರಿಂದಾಗಿ ಸುಮಾರು 1,200 ಉದ್ಯೋಗಗಳು ಮತ್ತು ಪೂರೈಕೆಗಾಗಿ ಇನ್ನೂ ಸಾವಿರಾರು ಉದ್ಯೋಗಗಳನ್ನು ಸೃಷ್ಟಿ ಸಾಧ್ಯವಾಗಲಿದೆ ಎಂದು ಜೆಸಿಬಿ ಇಂಡಿಯಾ ಸಿಇಒ ಮತ್ತು ಎಂಡಿ ದೀಪಕ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಮೊಸಳೆ ಬಾಯಲ್ಲಿ ನಿಮ್ಮ ಕಾಲಿರುವಾಗ, ಅದರೊಂದಿಗೆ ಮಾತನಾಡಲು ಹೇಗೆ ಸಾಧ್ಯ: ಬೋರಿಸ್ ಜಾನ್ಸನ್

ಇಂಗ್ಲೆಂಡ್‌ನಲ್ಲಿ 11 ಕಾರ್ಖಾನೆಗಳಿದ್ದು, 7,500 ಕ್ಕಿಂತ ಹೆಚ್ಚು ಜನರನ್ನು ನೇಮಿಸಿಕೊಂಡಿವೆ. ಜೆಸಿಬಿ ಮೊದಲ ಬಾರಿಗೆ 1979 ರಲ್ಲಿ ಭಾರತದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿತು. ಈಗ ನಿರ್ಮಾಣ ಸಲಕರಣೆಗಳು ದೇಶದ ಪ್ರಮುಖ ಉತ್ಪಾದಕವಾಗಿದೆ. ಭಾರತವು 2007 ರಿಂದ ಪ್ರತಿ ವರ್ಷ ಜೆಸಿಬಿಯ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈಗ ಭಾರತದಲ್ಲಿ ಮಾರಾಟವಾಗುವ ಪ್ರತಿಯೊಂದು ನಿರ್ಮಾಣ ಯಂತ್ರಗಳಲ್ಲಿ ಎರಡರಲ್ಲಿ ಒಂದನ್ನು ಜೆಸಿಬಿಯಿಂದ ತಯಾರಿಸಲಾಗುತ್ತದೆ.

ಜೈಪುರ ಮತ್ತು ಪುಣೆ ಸೇರಿದಂತೆ ಭಾರತದಲ್ಲಿ ಜೆಸಿಬಿ ಆರು ಕಾರ್ಖಾನೆಗಳನ್ನು ಹೊಂದಿದೆ. ಜಾನ್ಸನ್ ಗುರುವಾರದಿಂದ ಭಾರತಕ್ಕೆ ಎರಡು ದಿನಗಳ ಭೇಟಿಯಲ್ಲಿದ್ದಾರೆ.

Leave a Reply

Your email address will not be published.

Back to top button