ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದ 2 ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ (Sathwik) ಕ್ಷೇಮವಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ.
ಈ ಸಂಬಂಧ ಜಿಲ್ಲಾಧಿಕಾರಿ ಭೂಬಾಲನ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗು ಅರೋಗ್ಯವಾಗಿದ್ದಾನೆ. ಸಣ್ಣ-ಪುಟ್ಟ ಗಾಯ ಬಿಟ್ಟರೆ ಯಾವುದೇ ಗಾಯಗಳು ಇಲ್ಲ. ಘಟನೆ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಗು ಸಂದ್ಪಿಸಿದೆ. ಮಗು ಚಟುವಟಿಕೆಯಿಂದ ಕೂಡಿದೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ನಾಳೆ ಒಂದು ದಿನ ನೋಡಿಕೊಂಡು ಮಗುವನ್ನ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಸಾತ್ವಿಕ್ಗೆ ಮರು ನಾಮಕರಣ: ಮಗನ ಆರೋಗ್ಯದ ಕುರಿತು ತಂದೆ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗ ಸಂಪೂರ್ಣ ಆರೋಗ್ಯದಿಂದ ಇದ್ದಾನೆ. ನಿನ್ನೆ ಎಂಆರ್ಐ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ್ದಾರೆ. ಎಲ್ಲವೂ ಸಾಮಾನ್ಯವಾಗಿದೆ ಅಂತಾ ವೈದ್ಯರು ಹೇಳಿದ್ದಾರೆ. ನಮ್ಮ ಮಗನನ್ನ ಉಳಿಸಿಕೊಟ್ಟ ಸಂಪೂರ್ಣ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದರು. ಇದನ್ನೂ ಓದಿ: ಕೊಳವೆ ಬಾವಿ ದುರಂತ- ಸಾವು ಗೆದ್ದ ಸಾತ್ವಿಕ್
Advertisement
Advertisement
ಲಚ್ಯಾಣ ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗ ಮಹಾರಾಜರ ಕೃಪೆಯಿಂದಲೇ ನಮ್ಮ ಮಗ ಮರಳಿದ್ದಾನೆ. ಕಾರಣ ಸಿದ್ಧಲಿಂಗ ಮುತ್ಯಾನ ಹೆಸರನ್ನ ಸಾತ್ವಿಕ್ ಗೆ ಮರು ನಾಮಕರಣ ಮಾಡಲಿದ್ದೇವೆ. ಇದೇ ತಿಂಗಳ 28 ರಂದು ಸಿದ್ಧಲಿಂಗ ಮಹರಾಜರ ಜಾತ್ರಾ ಮಹೋತ್ಸವ ಇದೆ. ಆಗ ಸಾತ್ವಿಕ್ ಮರುನಾಮಕರಣ ಕಾರ್ಯ ಮಾಡಲಿದ್ದೇವೆ. ಸಮಸ್ತ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಸಾತ್ವಿಕ್ ತಪಾಸಣೆಗೆ ಬಂದ ಜಿಲ್ಲಾ ಸರ್ಜನ್ ಶಿವಾನಂದ ಮಾಸ್ತಿಹೊಳಿ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಾತ್ವಿಕ್ಗೆ ಚಿಕಿತ್ಸೆ ನಡೆಯುತ್ತಿದ್ದು, ನಿನ್ನೆಯಿಂದಲೆ ತಪಾಸಣೆ ಕಾರ್ಯ ನಡೆದಿದೆ. ಸಾತ್ವಿಕ್ ನನ್ನ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾನೆ. ಎರಡು ದಿನ ನಿಗಾದಲ್ಲಿ ಇಡಲಾಗಿದೆ. ಸದ್ಯ ವೈದ್ಯರ ತಂಡದಿಂದ ನಡೆಯುತ್ತಿರುವ ತಪಾಸಣೆ ಕಾರ್ಯ ನಡೆಸುತ್ತಿದೆ ಎಂದಿದ್ದಾರೆ.
ಉಪ್ಪಿಟ್ಟು ಅಂದ್ರೆ ಇಷ್ಟ: ಸಾತ್ವಿಕ್ ಆರೋಗ್ಯವಾಗಿದ್ದಾನೆ, ಭಯಪಡುವ ಅವಶ್ಯಕತೆ ಇಲ್ಲ. ಆತನಿಗೆ ಉಪ್ಪಿಟ್ಟು ಅಂದ್ರೆ ಇಷ್ಟ. ಹೀಗಾಗಿ ಬೆಳಗ್ಗೆ ಉಪ್ಪಿಟ್ಟು, ರಾಗಿ ಗಂಜಿ ಸೇವಿಸಿದ್ದಾನೆ. ಸದ್ಯ ಯಾವುದೇ ತೊಂದರೆ ಇಲ್ಲ. ಏನೇ ಹೆಚ್ಚು ಕಮ್ಮಿ ಆಗುವುದಿದ್ದರೆ 48 ಗಂಟೆ ಒಳಗೆ ಆಗುತ್ತೆ. ಕಾರಣ 48 ಗಂಟೆ ನಿಗಾದಲ್ಲಿ ಇಟ್ಟಿದ್ದೇವೆ ಅಷ್ಟೆ. ಮಗುವಿನ ಆರೋಗ್ಯ ಸ್ಥಿತಿ ನೋಡಿ ಡಿಸ್ಚಾರ್ಜ್ ಮಾಡುತ್ತೇವೆ. ಇದೊಂದು ವಿಸ್ಮಯ ಅಂತಾನೆ ಹೇಳಬೇಕು. ಈ ರೀತಿ 16 ತಿಂಗಳ ಮಗು ಯಾವುದೆ ತೊಂದರೆ ಇಲ್ಲದೆ ಬದುಕುಳಿದಿದ್ದು ದೇವರ ಕೃಪೆ ಅಂತಾನೇ ಹೇಳಬೇಕು ಎಂದು ಅವರು ತಿಳಿಸಿದರು.