– ಡಿಸಿಎಂ ಮನೆಗೂ ತಟ್ಟಿದ ನೀರಿನ ಹಾಹಾಕಾರದ ಬಿಸಿ
ಬೆಂಗಳೂರು: ನಗರದಲ್ಲಿ (Bengaluru) ಉಂಟಾಗಿರುವ ನೀರಿನ ಹಾಹಾಕಾರದ ಬಿಸಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರಿಗೂ ತಟ್ಟಿದೆ. ನಮ್ಮ ಮನೆಯ ಬೋರ್‌ವೆಲ್‌ನಲ್ಲೂ (Borewell) ನೀರಿಲ್ಲ. ನೀರನ್ನು ಹೊರಗಿನಿಂದ ತರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರಿಗೆ ಟೀಕೆ ಮಾಡೋದು ಬಿಟ್ಟರೆ ಬೇರೇನೂ ಇಲ್ಲ. ಸಲಹೆ ಕೊಟ್ಟರೆ ನಾವು ಸ್ವೀಕಾರ ಮಾಡ್ತೀವಿ. ಚರಿತ್ರೆಯಲ್ಲೇ ಟ್ಯಾಂಕರ್ ಕಂಟ್ರೋಲ್ ಮಾಡಿರೋದು ನಾವು. ಈ ದಂಧೆಗೆ ಕಡಿವಾಣ ಹಾಕಿರೋದು ನಾವು. ಅವರಿಗೆ ಒಂದು ದರ ಫಿಕ್ಸ್ ಕುರಿತು ಅಧಿಕಾರಿಗಳು ಚರ್ಚೆ ಮಾಡಿದ್ದಾರೆ ಎಂದರು. ಇದನ್ನೂ ಓದಿ: ನಾನು ಮೈಸೂರು-ಕೊಡಗು ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ: ಪ್ರತಾಪ್ ಸಿಂಹ
Advertisement
Advertisement
ಕಾವೇರಿ ನೀರು (Cauvery water) ಹೆಚ್ಚಾಗಿ ಬರುತ್ತಿದೆ. ನೀರಿಗೆ ಹಾಹಾಕಾರ ಇಲ್ಲ ಎಂದು ನಾವು ಹೇಳ್ತಾ ಇಲ್ಲ. ನಮ್ಮ ಮನೆಯ ಬೋರ್‌ವೆಲ್‌ನಲ್ಲೂ ನೀರಿಲ್ಲದೆ, ಬೇರೆ ಕಡೆಯಿಂದ ತರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾರು ತೊಳೆಯಲು, ದನಕರು ತೊಳೆಯಲು ನೀರನ್ನು ಬಳಸಬೇಡಿ ಎಂದು ಹೇಳಿದ್ದೇವೆ. ಆರ್‌ಓ ವಾಟರ್ ಎಲ್ಲೆಲ್ಲಿ ಕೆಟ್ಟಿದಿಯೋ ಅದನ್ನ ಸರಿ ಮಾಡುತ್ತಿದ್ದೇವೆ ಎಂದಿದ್ದಾರೆ.
Advertisement
ನೋಡೆಲ್ ಆಫೀಸರ್‌ಗಳನ್ನು ಬೆಂಗಳೂರು ನಗರಕ್ಕೂ ಹಾಕಿದ್ದೇವೆ. ಬೆಂಗಳೂರು ಗ್ರಾಮಾಂತರ ಪೂರ್ತಿ ಬೋರ್‌ವೆಲ್‌ಗಳಿವೆ. ನಗರದಲ್ಲಿ ಕಾವೇರಿ ವಾಟರ್ ಬರುತ್ತದೆ. ಹಾಗಾಗಿ ಅಲ್ಲಿಗೆ ನೋಡಲ್ ಆಫೀಸರ್‌ಗಳನ್ನು ಹಾಕಿದ್ದೇವೆ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೀತಕ್ಕ ಗೆಲ್ತಾರೆ: ಮಧು ಬಂಗಾರಪ್ಪ