ಮಾಸ್ಕೋ: ರಷ್ಯಾದಲ್ಲಿ 7.47 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದ್ದ ಪೇಂಟಿಂಗ್‍ನನ್ನು ಸೆಕ್ಯೂರಿಟಿ ಗಾರ್ಡ್ ನಾಶ ಮಾಡಿರುವ ಘಟನೆ ಮಾಸ್ಕೋದಲ್ಲಿ ನಡೆದಿದೆ.
ಒಬ್ಲಾಸ್ಟ್ ಪ್ರದೇಶದ ಯೆಲ್ಟ್ಸಿನ್ ಕೇಂದ್ರದಲ್ಲಿ ಅನ್ನಾ ಲೆಪೋರ್ಸ್ಕಯಾ ಪೇಂಟಿಂಗ್ ಪ್ರದರ್ಶನದಲ್ಲಿ ಸೆಕ್ಯುರಿಟಿ ಗಾರ್ಡ್ ತನ್ನ ಮೊದಲ ದಿನದ ಕೆಲಸಕ್ಕೆ ಬಂದಿದ್ದನು. ಈ ವೇಳೆ ಮುಖಗಳಿಲ್ಲದ ‘ಮೂವರು ಮನುಷ್ಯರ’ ಪೇಂಟಿಂಗ್ ನೋಡಿದ್ದಾನೆ. ಅದನ್ನು ನೋಡಿ ಬೇಸರಗೊಂಡಿದ್ದು, ಬಾಲ್ ಪಾಯಿಂಟ್ ಪೆನ್‍ನಿಂದ ಕಣ್ಣುಗಳನ್ನು ಬಿಡಿಸಿ ಪೇಂಟಿಂಗ್ ಹಾಳುಮಾಡಿದ್ದಾನೆ. ಈ ಪೇಂಟಿಂಗ್‍ಗೆ 1 ಮಿಲಿಯನ್(ರೂ. 7.47 ಕೋಟಿ) ವಿಮೆ ಮಾಡಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ರಾಜ್ಯ ನಾಯಕರ ಮಧ್ಯೆ ರಮೇಶ್ ಜಾರಕಿಹೊಳಿ ಗುರುತಿಸಿದ ಅಮಿತ್ ಶಾ!
Advertisement
Advertisement
ಸಿಬ್ಬಂದಿ ಹೆಸರನ್ನು ಹೇಳಲಿಚ್ಛಿಸದ ಖಾಸಗಿ ಕಂಪನಿಯು, ಈ ಕೃತ್ಯ ಮಾಡಿದವನಿಗೆ 60 ವರ್ಷ ವಯಸ್ಸಾಗಿದೆ. ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದೆ.
Advertisement
ಈ ಪೇಂಟಿಂಗ್ ಡಿ 7 2021 ರಂದು ‘ದಿ ವರ್ಲ್ಡ್ ಆಸ್ ನಾನ್-ಆಬ್ಜೆಕ್ಟಿವಿಟಿ, ದಿ ಬರ್ತ್ ಆಫ್ ಎ ನ್ಯೂ ಆರ್ಟ್’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಪೇಂಟಿಂಗ್ ಬೆಲೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಲ್ಫಾ ವಿಮಾ ಕಂಪನಿಯಲ್ಲಿ ಈ ಪೇಂಟಿಂಗ್‍ಗೆ 7.47 ಕೋಟಿ ರೂ. ವಿಮೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Advertisement
ಘಟನೆಯ ನಂತರ ಪೊಲೀಸರು, ಈ ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪ್ರಾರಂಭಿಸಿಲಾಗಿದೆ. ಆರೋಪಿಗೆ 39,900 ರೂ. ದಂಡ ಮತ್ತು ಒಂದು ವರ್ಷ ಶಿಕ್ಷೆಯನ್ನು ವಿಧಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮಹಿಳೆ ಬೆನ್ನ ಮೇಲೆ ಎಸ್‍ಪಿ ಸ್ಟಿಕ್ಕರ್ ಅಂಟಿಸಿದ ವೀಡಿಯೋ ವೈರಲ್ – ಮಹಿಳೆ ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿದ ಕಲಾವಿದರು, ಪೇಂಟಿಂಗ್ ತನ್ನ ಹಿಂದಿನ ವೈಭವಕ್ಕೆ ಮರುಸ್ಥಾಪಿಸುವ ಪ್ರಯತ್ನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಪೇಂಟಿಂಗ್ ಮಾಸ್ಕೋಗೆ ಕಳುಹಿಸಲಾಗಿದೆ. ಪೇಂಟಿಂಗ್‍ನಲ್ಲಿ ಯಾವುದೇ ರೀತಿ ಕಲೆ ಕಾಣಿಸದಂತೆ ಮಾಡಬಹುದು ಎಂದು ಭರವಸೆಯನ್ನು ಕೊಟ್ಟಿದ್ದಾರೆ.