ಶಿಮ್ಲಾ: ಇಂಡೋ-ಟಿಬೆಟಿಯನ್ ಗಡಿಯಲ್ಲಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
52 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ದೇಶ ಕಾಯುವ ಯೋಧರು ದಪ್ಪ ಉಣ್ಣೆಯ ಬಟ್ಟೆಯನ್ನು ಧರಿಸಿ ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳಲ್ಲಿ ಕಬಡ್ಡಿ ಆಡುತ್ತಾ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಚೀನಾದಲ್ಲಿ 2 ವರ್ಷಗಳ ಬಳಿಕ ಒಂದೇ ದಿನ 3 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್
#WATCH ‘Himveers’ of Indo-Tibetan Border Police (ITBP) play Kabaddi in the snow in the high Himalayas in Himachal Pradesh pic.twitter.com/Ir146AhWTv
— ANI (@ANI) March 13, 2022
ಈ ವೀಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಬಹಳ ಹುಮ್ಮಸ್ಸಿನಿಂದ ಹಿಮದ ಮಧ್ಯೆ ಆಟ ಆಡುತ್ತಿದ್ದಾರೆ (ಫುಲ್ ಆಫ್ ಜೋಶ್, ಪ್ಲೇಯಿಂಗ್ ಇನ್ ಸ್ನೋ) ಎಂದು ಬರೆದುಕೊಂಡಿದೆ. ಒಟ್ಟಾರೆ ಈ ವೀಡಿಯೋವನ್ನು ಇಲ್ಲಿಯವರೆಗೂ ಸುಮಾರು 30,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಲಾಕ್‍ಡೌನ್- 90 ಲಕ್ಷ ಮಂದಿ ನಿವಾಸಿಗಳು ಮನೆಯಲ್ಲಿ ಲಾಕ್
Full of josh,
Playing in snow…#Himveers of Indo-Tibetan Border Police (ITBP) playing Kabaddi in high Himalayas in Himachal Pradesh.#FitnessMotivation #FitIndia@KirenRijiju @ianuragthakur @FitIndiaOff pic.twitter.com/VjEEsuA2HL
— ITBP (@ITBP_official) March 13, 2022
ಈ ಮುನ್ನ ಐಟಿಬಿಪಿ ತನ್ನ ಸಿಬ್ಬಂದಿ ಹಿಮದಿಂದ ಆವೃತವಾದ ಪ್ರದೇಶದಲ್ಲಿ ತಿರುಗುತ್ತಿರುವ ಮತ್ತು ಹಗ್ಗಗಳ ಸಹಾಯದಿಂದ ಒಬ್ಬರ ಹಿಂದೆ ಮತ್ತೊಬ್ಬರು ಹಿಂಬಾಲಿಸುತ್ತಿರುವ ಮತ್ತೊಂದು ವೀಡಿಯೊವನ್ನು ಅಪ್‍ಲೋಡ್ ಮಾಡಿತ್ತು. ವಿಡಿಯೋದಲ್ಲಿ ಐಟಿಬಿಪಿ ಸಿಬ್ಬಂದಿ ಹೆಗಲ ಮೇಲೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಕೈಯಲ್ಲಿ ಕೋಲು ಹಿಡಿದು ಮುಂದೆ ಸಾಗುತ್ತಿರುವುದು ಕಾಣಬಹುದಾಗಿದೆ.