ನವದೆಹಲಿ: ಚೀನಾ ಹಾಗೂ ಭಾರತದ (India) ಗಡಿ ಭಾಗದ ಪೂರ್ವ ಲಡಾಖ್‍ನ (Ladakh) ನ್ಯೋಮಾ ಬೆಲ್ಟ್‌ನಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಏರ್‌ಫಿಲ್ಡ್ ನಿರ್ಮಿಸಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (Border Roads Organisation) ಸಜ್ಜಾಗಿದೆ. ಇದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೆಪ್ಟೆಂಬರ್ 12 ರಂದು ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲದೇ ಇದೇ ವೇಳೆ 2,941 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳನ್ನು ಸಿಂಗ್ ಉದ್ಘಾಟಿಸಲಿದ್ದಾರೆ.
ಸೇನಾ ಚಾಪರ್‌ಗಳು ಮತ್ತು ವಿಶೇಷ ಕಾರ್ಯಾಚರಣೆಯ ವಿಮಾನಗಳನ್ನು ಲ್ಯಾಂಡ್ ಮಾಡಲು ಅನುಕೂಲವಾಗುವಂತೆ ಈ ಏರ್‌ಫಿಲ್ಡ್ ನಿರ್ಮಾಣ ಮಾಡಲಾಗುತ್ತದೆ. ಈ ಭಾಗದಲ್ಲಿ ಚೀನಾದೊಂದಿಗೆ ಇರುವ ಗಡಿ ವಿವಾದಗಳಿಂದ ಈ ಯೋಜನೆ ಮಹತ್ವ ಪಡೆದಿದೆ. ಅಲ್ಲದೇ ಭಾರತದ ವಾಯುಪಡೆಯ ಸಾಮರ್ಥ್ಯವನ್ನು ಇದು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಧಿಕೃತ ಮ್ಯಾಪ್‌ನಲ್ಲಿ ಅರುಣಾಚಲ ಪ್ರದೇಶ ಸೇರಿಸಿಕೊಂಡ ಚೀನಾ – ದಕ್ಷಿಣ ಟಿಬೆಟ್ ಎಂದು ನಾಮಕರಣ
ಈ ಯೋಜನೆಗಳಿಂದ ಉತ್ತರದ ಗಡಿಗಳಲ್ಲಿನ ಸಮಸ್ಯೆಗಳನ್ನು ಎದುರಿಸಲು ಸಹಕಾರಿಯಾಗಿದೆ. ಇದರೊಂದಿಗೆ ವಾಣಿಜ್ಯ ಉದ್ದೇಶಕ್ಕೂ ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಭಾರತದ ಗಡಿ ಪ್ರದೇಶಗಳಲ್ಲಿನ ನೆರೆಯ ದೇಶಗಳೊಂದಿಗೆ ಸ್ನೇಹ ಸಂಬಂಧಕ್ಕಾಗಿ ರಸ್ತೆ ಜಾಲಗಳನ್ನು ಅಭಿವೃದ್ಧಿ ಪಡೆಸುವ ಉದ್ದೇಶ ಸಹ ಇದರಲ್ಲಿ ಕೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರದ ಹಿಂದಷ್ಟೇ ಭಾರತದ ಭಾಗಗಳನ್ನು ಸೇರಿಸಿ ಚೀನಾ ಮ್ಯಾಪ್ ಬಿಡುಗಡೆ ಮಾಡಿತ್ತು. ಇದರಲ್ಲಿ ಅರುಣಾಚಲ ಪ್ರದೇಶವನ್ನು ದಕ್ಷಿಣ ಚೀನಾ ಎಂದು ಹೇಳಿಕೊಂಡಿತ್ತು. ಇದರ ನಡುವೆಯೇ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]