ಪರ್ತ್: ಆಸ್ಟ್ರೇಲಿಯಾ-ಭಾರತದ (Aus vs Ind) ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಮೊದಲ ದಿನವೇ 17 ವಿಕೆಟ್ ಪತನವಾಗಿದೆ. 1952ರ ಬಳಿಕ ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದ ಮೊದಲ ದಿನವೇ ಅತಿಹೆಚ್ಚು ವಿಕೆಟ್ ಪತನವಾಗಿದೆ. ಸಹಜವಾಗಿಯೇ ಅನುಕೂಲಕರ ಪಿಚ್‌ನಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ದಿನದ ಅಂತ್ಯಕ್ಕೆ 67 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿರುವ ಆಸೀಸ್ ಶನಿವಾರ 2ನೇ ದಿನದ ಆಟ ಮುಂದುವರಿಸಲಿದೆ.
JASPRIT BUMRAH – THE GREATEST. 🐐pic.twitter.com/SUSBhTfxrj
— Mufaddal Vohra (@mufaddal_vohra) November 22, 2024
Advertisement
ಪರ್ತ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ (Team India), ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು. ಆದ್ರೆ ಅಲ್ಪ ಮೊತ್ತ ಎಂದು ಭಾವಿಸಿದ್ದ ಆಸೀಸ್ ಬ್ಯಾಟರ್‌ಗಳಿಗೆ ಭಾರತೀಯ ಬೌಲರ್‌ಗಳು ಮಣ್ಣುಮುಕ್ಕಿಸಿದರು. ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah), ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಅವರ ವೇಗದ ದಾಳಿಗೆ ಆಸೀಸ್ ಟಾಪ್ ಬ್ಯಾಟರ್‌ಗಳು ಧೂಳಿಪಟವಾದರು. ಇದನ್ನೂ ಓದಿ: IND vs Aus Test| ವಿವಾದಾತ್ಮಕ ತೀರ್ಪಿಗೆ ರಾಹುಲ್ ಔಟ್
Advertisement
Advertisement
ಆರಂಭಿಕ ಉಸ್ಮಾನ್ ಖವಾಜ (8 ರನ್), ನಾಥನ್ ಮೆಕ್‌ಸ್ವೀನಿ (10 ರನ್), ಮಾರ್ನಸ್ ಲಾಬುಶೇನ್ (2 ರನ್), ಟ್ರಾವಿಸ್ ಹೆಡ್ (11 ರನ್), ಸ್ಟೀವ್ ಸ್ಮಿತ್ (0), ಮಿಚೆಲ್ ಮಾರ್ಷ್ (6 ರನ್), ನಾಯಕ ಪ್ಯಾಟ್ ಕಮ್ಮಿನ್ಸ್ (3 ರನ್) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ ಕ್ರೀಸ್‌ನಲ್ಲಿ ಸುಧಾರಿತ ಪ್ರದರ್ಶನ ನೀಡಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಲೆಕ್ಸ್ ಕ್ಯಾರಿ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್, ಮಿಚೆಲ್ ಸ್ಟಾರ್ಕ್ 6 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.
Advertisement
ನಾಯಕನಾಗಿ ಮಿಂಚಿದ ಬುಮ್ರಾ:
ನಾಯಕನಾಗಿ ಕಣಕ್ಕಿಳಿದ ಬುಮ್ರಾ 10 ಓವರ್‌ಗಳಲ್ಲಿ 3 ಮೇಡಿನ್ ಸೇರಿದಂತೆ ಕೇವಲ 17 ರನ್ ಬಿಟ್ಟುಕೊಟ್ಟು ಪ್ರಮುಖ ನಾಲ್ಕು ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಹಾಗೂ ಹರ್ಷಿತ್ ರಾಣಾ 1 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
150ಕ್ಕೆ ಭಾರತ ಆಲೌಟ್:
ಇದಕ್ಕೂ ಮುನ್ನ ಬ್ಯಾಟ್ ಬೀಸಿದ ಭಾರತ 150 ರನ್‌ಗಳಿಗೆ ಆಕೌಟ್ ಆಯಿತು. ನಿತೀಶ್ ಕುಮಾರ್ ರೆಡ್ಡಿ 41 ರನ್ (59 ಎಸೆತ, 6 ಬೌಂಡರಿ, 1 ಸಿಕ್ಸರ್), ರಿಷಬ್ ಪಂತ್ 37 ರನ್ (78 ಎಸೆತ, 3 ಬೌಂಡರಿ, 1 ಸಿಕ್ಸರ್), ರನ್ ಕೆ.ಎಲ್ ರಾಹುಲ್ 26 ರನ್ (74 ಎಸೆತ, 3 ಬೌಂಡರಿ) ಗಳಿಸಿದ್ದು ಬಿಟ್ಟರೆ, ಉಳಿದವರು ಅಲ್ಪ ಮೊತ್ತಕ್ಕೆ ಆಲೌಟ್ ಆದರು. ಆರಂಭಿಕ ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್ ಶೂನ್ಯ ಸುತ್ತಿದ್ದರು.
ಆಸೀಸ್ ಪರ ಜೋಶ್ ಹೇಜಲ್ವುಡ್ 4 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಕಿತ್ತರು. ಇದನ್ನೂ ಓದಿ: ICC Champions Trophy 2025 | ಈ ವಾರವೇ ವೇಳಾಪಟ್ಟಿ ಬಿಡುಗಡೆ ಸಾಧ್ಯತೆ
ವಿವಾದಾತ್ಮಕ ತೀರ್ಪಿಗೆ ರಾಹುಲ್ ಔಟ್:
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (Test Cricket) ಕೆಎಲ್ ರಾಹುಲ್ (KL Rahul) ಅವರು ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಭಾರತ (Team India) 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಪರಿಸ್ಥಿತಿ ಹೀಗಿದ್ದರೂ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ರಾಹುಲ್ ನಿಧಾನವಾಗಿ ಬ್ಯಾಟ್ ಬೀಸಿ ಇನ್ನಿಂಗ್ಸ್ ಕಟ್ಟುತ್ತಿದ್ದರು. ಭಾರತ ಇನ್ನಿಂಗ್ಸ್‌ನ 23 ಓವರ್ ಅನ್ನು ಸ್ಟ್ರಾಕ್ ಎಸೆಯುತ್ತಿದ್ದರು. ಎರಡನೇ ಎಸೆತದ ವೇಳೆ ಸ್ಟೈಕ್‌ನಲ್ಲಿ ರಾಹುಲ್ ಬಾಲನ್ನು ತಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್‌ನ ಎಡ್ಜ್ ಬಳಿ ಸಾಗಿ ವಿಕೆಟ್ ಕೀಪರ್ ಕೈ ಸೇರಿತು.
A MOMENT TO REMEMBER FOR LIFETIME FOR HARSHIT RANA. 🇮🇳
– What a Jaffa to dismiss Travis Head. pic.twitter.com/0hXPuosMvC
— Mufaddal Vohra (@mufaddal_vohra) November 22, 2024
ಆಸ್ಟ್ರೇಲಿಯಾದ (Australia) ಆಟಗಾರರು ಔಟ್ ಮನವಿ ಸಲ್ಲಿಸಿದರೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಹೀಗಾಗಿ ಆಸೀಸ್ ಆಟಗಾರರು ಡಿಆರ್‌ಎಸ್ (DRS) ಮನವಿ ಮಾಡಿದರು. ರಿಪ್ಲೈ ವೇಳೆ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬುದು ಸ್ಪಷ್ಟವಾಗಿರಲಿಲ್ಲವಾದರೂ, ಸ್ನಿಕ್ಕೋಮೀಟರ್ ಏರಿಳಿತವನ್ನು ಆಧರಿಸಿ ರಾಹುಲ್ ಔಟ್ ಎಂದು ತೀರ್ಪು ಪ್ರಕಟಿಸಲಾಯಿತು. ಹೀಗಾಗಿ ಫೀಲ್ಡ್ ಅಂಪೈರ್ ಕೂಡ ತಮ್ಮ ನಿರ್ಧಾರ ಬದಲಿಸಿ ಔಟ್ ತೀರ್ಪು ನೀಡಿದರು. 26 ರನ್ ಗಳಿಸಿದ ಕೆಎಲ್ ರಾಹುಲ್ ಅಸಮಾಧಾನದಿಂದಲೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ನಂತರ ರಿಪ್ಲೈ ನೋಡಿದಾಗ ಪ್ಯಾಡಿಗೆ ಬ್ಯಾಟ್ ಬಡಿದಿರುವುದು ಗೊತ್ತಾಗಿದೆ. ಮೂರನೇ ಅಂಪೈರ್ ಸ್ವಲ್ಪ ಪರಿಶೀಲನೆ ಮಾಡಿ ಇನ್ನೊಂದು ಕೋನದಿಂದ ನೋಡಿದ್ದರೆ ತೀರ್ಪು ಬದಲಾಗುವ ಸಾಧ್ಯತೆ ಇತ್ತು. ಈಗ ಈ ವಿಚಾರವನ್ನು ಅಭಿಮಾನಿಗಳು ಪ್ರಸ್ತಾಪಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.