– ಪ.ಬಂಗಾಳ ಅಸ್ಥಿರಗೊಳಿಸಲು ಕೇಂದ್ರದಿಂದ ತಂತ್ರ
ಕೊಲ್ಕತ್ತಾ: ಪಶ್ಚಿಮ ಬಂಗಾಳ (West Bengal) ರಾಜ್ಯವನ್ನು ಅಸ್ಥಿರಗೊಳಿಸಲು ಕೇಂದ್ರ ಭದ್ರತಾ ಪಡೆಗಳು (BSF) ಬಾಂಗ್ಲಾದೇಶದ (Bangladesh) ಭಯೋತ್ಪಾದಕರನ್ನು ಒಳ ನುಸುಳಲು ಅವಕಾಶ ಮಾಡಿಕೊಡುತ್ತಿವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗಂಭೀರ ಆರೋಪ ಮಾಡಿದ್ದಾರೆ. ಬಾಂಗ್ಲಾದೇಶದ ಒಳನುಸುಳುವಿಕೆಯಿಂದ ಪಶ್ಚಿಮ ಬಂಗಾಳದಲ್ಲಿ ಶಾಂತಿ ಹಾಳಾಗುತ್ತಿದೆ ಎನ್ನುವ ಅಮಿತ್ ಶಾ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.
Advertisement
ಆಡಳಿತಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶ ಭಯೋತ್ಪಾದಕರನ್ನು ಪಶ್ಚಿಮ ಬಂಗಾಳದೊಳಗೆ ನುಸುಳಲು ಅವಕಾಶ ನೀಡುವುದು ಕೇಂದ್ರ ಸರ್ಕಾರದ ಯೋಚಿತ ಪ್ರಯತ್ನವಾಗಿದೆ. ಇದರ ಭಾಗವಾಗಿ ಬಾಂಗ್ಲಾದೇಶದ ಗಡಿಯನ್ನು ಕಾಪಾಡುವ ಬಿಎಸ್‌ಎಫ್ ಬಂಗಾಳದೊಳಗೆ ಭಯೋತ್ಪಾದಕರು ನುಸುಳಲು ಅವಕಾಶ ನೀಡುತ್ತಿದೆ ಮತ್ತು ಮಹಿಳೆಯರನ್ನು ಹಿಂಸಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿರುವ ಎಲ್ಲಾ ಡಿಸಿಪಿಗಳಿಗೆ ಮೊಬೈಲ್ ಗಿಫ್ಟ್
Advertisement
Advertisement
ಬಿಎಸ್‌ಎಫ್ ವಿವಿಧ ಪ್ರದೇಶಗಳಿಂದ ಬಂಗಾಳಕ್ಕೆ ಭಯೋತ್ಪಾದಕರು ನುಸುಳಲು ಅವಕಾಶ ನೀಡುತ್ತಿದೆ ಮತ್ತು ಮಹಿಳೆಯರಿಗೆ ಚಿತ್ರಹಿಂಸೆ ನೀಡುತ್ತಿದೆ. ಟಿಎಂಸಿ ಗಡಿಯನ್ನು ಕಾಪಾಡುತ್ತಿಲ್ಲ, ಗಡಿ ನಮ್ಮ ಕೈಯಲ್ಲಿಲ್ಲ, ಆದ್ದರಿಂದ ಯಾರಾದರೂ ಟಿಎಂಸಿ ಒಳನುಸುಳುವಿಕೆಗೆ ಅನುಮತಿ ನೀಡಿದೆ ಎಂದು ಆರೋಪಿಸಿದರೆ, ಅದು ಬಿಎಸ್‌ಎಫ್‌ನದು ಎಂದು ನಾನು ಎತ್ತಿ ತೋರಿಸುತ್ತೇನೆ, ಅದು ನನ್ನ ಜವಾಬ್ದಾರಿ ಎಂದು ಕಿಡಿಕಾರಿದರು. ಇದನ್ನೂ ಓದಿ: ʼಇಂಡಿಯಾʼಗೆ ಬನ್ನಿ, ಬಾಗಿಲು ಸದಾ ತೆರೆದಿದೆ: ನಿತೀಶ್‌ಗೆ ಲಾಲೂ ಆಫರ್
Advertisement
ಬಿಎಸ್‌ಎಫ್ ಒಳನುಸುಳುವಿಕೆಗೆ ಅವಕಾಶ ನೀಡುವ ಸ್ಥಳಗಳನ್ನು ತನಿಖೆ ಮಾಡಲು ಮತ್ತು ಗುರುತಿಸಲು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚನೆ ನೀಡುತ್ತೇನೆ. ಪೊಲೀಸರ ಬಳಿ ಎಲ್ಲಾ ಮಾಹಿತಿ ಇದೆ. ಕೇಂದ್ರದ ಬಳಿಯೂ ಇದೆ. ರಾಜೀವ್ ಕುಮಾರ್ (ಡಿಜಿಪಿ) ಮತ್ತು ಸ್ಥಳೀಯ ಮೂಲಗಳಿಂದ ನನಗೆ ಈ ಮಾಹಿತಿ ಬಂದಿದೆ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು. ಇದನ್ನೂ ಓದಿ: ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಅಂದಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ!
ಬಂಗಾಳ ಮತ್ತು ನೆರೆಯ ಬಾಂಗ್ಲಾದೇಶದ ನಡುವೆ ಯಾವುದೇ ದ್ವೇಷವಿಲ್ಲ. ನಾವು ಶಾಂತಿ ಬಯಸುತ್ತೇವೆ. ಆದರೆ ಗೂಂಡಾಗಳನ್ನು ಇಲ್ಲಿ ಅನುಮತಿಸಲಾಗುತ್ತಿದೆ. ಅವರು ಅಪರಾಧಗಳನ್ನು ಮಾಡುತ್ತಾರೆ. ಬಳಿಕ ಗಡಿಗೆ ಹಿಂತಿರುಗುತ್ತಾರೆ. ಬಿಎಸ್‌ಎಫ್ ಇದನ್ನು ಸಕ್ರಿಯಗೊಳಿಸುತ್ತಿದೆ. ಇದರಲ್ಲಿ ಕೇಂದ್ರದ ಪಾತ್ರವಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಣ್ಣಾ ವಿವಿ ಲೈಂಗಿಕ ದೌರ್ಜನ್ಯ ಕೇಸ್ ರಾಜಕೀಯಗೊಳಿಸಲಾಗುತ್ತಿದೆ: ಮದ್ರಾಸ್ ಹೈಕೋರ್ಟ್
ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಬಾಂಗ್ಲಾದೇಶದ ಒಳನುಸುಳುವಿಕೆಗೆ ಬಂಗಾಳ ನರ್ಸರಿಯಾಗಿದೆ ಎಂದು ಹೇಳಿದರು. ಅಪರಾಧ ಚಟುವಟಿಕೆಯಲ್ಲಿ ಯಾರು ಸಿಕ್ಕಿಬೀಳುತ್ತಾರೋ ಅವರು ಬಾಂಗ್ಲಾದೇಶೀಯರು ಮತ್ತು ಅವರ ಹೆಚ್ಚಿನ ವಿಳಾಸಗಳು ಬಂಗಾಳದವು. ಮಮತಾ ದೀದಿ ಮತದ ದುರಾಸೆಯಿಂದ ಇದೆಲ್ಲವನ್ನೂ ಮಾಡುತ್ತಿದ್ದಾರೆ ಮತ್ತು ಬಂಗಾಳವನ್ನು ಬಾಂಗ್ಲಾದೇಶಿ ಮುಸ್ಲಿಮರು ಮತ್ತು ರೋಹಿಂಗ್ಯಾಗಳ ಹೆಬ್ಬಾಗಿಲು ಮಾಡುತ್ತಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ ಮತ್ತು ಇಡೀ ಜಗತ್ತು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ವಕ್ಫ್ ಕಾನೂನು ರದ್ದಾಗೋವರೆಗೂ ಹೋರಾಟ: ಯತ್ನಾಳ್