ಕೊಲೆ ಪ್ರಕರಣದ ಸಂಬಂಧ ಆರೋಪಿಯಾಗಿ ದರ್ಶನ್ (Darshan) ಪರಪ್ಪನ ಅಗ್ರಹಾರದಲ್ಲಿದ್ದಾರೆ. ನಟ ಸದ್ಯ ಯೋಗ, ಧ್ಯಾನ, ಪುಸ್ತಕದ ಮೊರೆ ಹೋಗಿದ್ದಾರೆ. ಇದೀಗ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ (Siddaroodha Matha) ದರ್ಶನ್‌ಗೆ ಪುಸ್ತಕ ಕೊರಿಯರ್ ಮಾಡಲಾಗಿದೆ. ಮಠದ ಧರ್ಮದರ್ಶಿ ಕಾರಾಗೃಹದಲ್ಲಿರುವ ದರ್ಶನಗೆ ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ಪೋಸ್ಟ್ ಮೂಲಕ ಕಳುಹಿಸಿದ್ದಾರೆ. ಇದನ್ನೂ ಓದಿ:ಎರಡು ಭಾಗಗಳಲ್ಲಿ ಬರಲಿದೆ ‘ಹಾಯ್ ನಾನ್ನಾ’ ಡೈರೆಕ್ಟರ್ ಜೊತೆಗಿನ ಜ್ಯೂ.ಎನ್‌ಟಿಆರ್ ಹೊಸ ಸಿನಿಮಾ
Advertisement
ಜೈಲಿನಲ್ಲಿರುವ ದರ್ಶನ್‌ಗೆ ಹುಬ್ಬಳ್ಳಿ ಸಿದ್ಧಾರೂಢ ಮಠದಿಂದ ಪುಸ್ತಕ ಕಳುಹಿಸಲಾಗಿದೆ. ಈ ಕುರಿತು ಸಿದ್ಧಾರೂಢ ಮಠದ ಧರ್ಮದರ್ಶಿಗಳಾದ ಡಾ.ಗೋವಿಂದ ಮಣ್ಣೂರು ಮಾತನಾಡಿ, ಸಿದ್ಧಾರೂಢರ ಚರಿತಾಮೃತ ಪುಸ್ತಕ ಕಳಿಸಿದ್ದೇವೆ. ಸುಮಾರು 200 ರಿಂದ 250 ಪುಟಗಳ ಪುಸ್ತಕ ಅದು. ಸಿದ್ದಾರೂಢರು ನಡೆದುಬಂದ ದಾರಿಯನ್ನು ಪುಸ್ತಕ ಒಳಗೊಂಡಿದೆ. ಪುಸ್ತಕ ಓದಿ ಖಂಡಿತ ದರ್ಶನ ಬದಲಾವಣೆ ಆಗುತ್ತಾರೆ ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.
Advertisement
Advertisement
2011 ರಲ್ಲಿ ನಟ ದರ್ಶನ್ ಐತಿಹಾಸಿಕ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದರು. ನಮ್ಮ ಮಠದಲ್ಲಿ ದರ್ಶನ್ ಅವರ ಎರಡು ಸಿನಿಮಾಗಳು ಶೂಟಿಂಗ್ ಆಗಿವೆ. ನಮ್ ಮಠಕ್ಕೂ ಅವರು ಬಂದಿದ್ದಾರೆ. ಅವರಿಗೆ ಜೈಲಿನಲ್ಲಿ ಪುಸ್ತಕ ಅಗತ್ಯ ಇದೆ ಅಂತ ಕೇಳಿದೆವು. ಹಾಗಾಗಿ ಮಠದಿಂದಲೇ ಪುಸ್ತಕ ಕಳುಹಿಸಲಾಗಿದೆ. ದರ್ಶನ್ ಅವರ ಮನ ಪರಿವರ್ತನೆಗೆ ಈ ಪುಸ್ತಕ ಸಹಾಯ ಮಾಡಲಿದೆ ಅನ್ನೋ ನಂಬಿಕೆ ಮಠದ್ದು ಎಂದು ಡಾ.ಗೋವಿಂದ್ ಮಣ್ಣೂರು (Govind Mannur) ಮಾತನಾಡಿದ್ದಾರೆ.