ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ ಮತ್ತು ಉದ್ಯಮಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಿ ಅಪರಿಚಿತ ವ್ಯಕ್ತಿಯೊಬ್ಬ 3.82 ಲಕ್ಷ ರೂ. ವಂಚಿಸಿದ್ದಾನೆ.
ಆರೋಪಿಯ ವಿರುದ್ಧ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬುಧವಾರ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕಪೂರ್ ಆಪ್ತರೊಬ್ಬರು ದೂರು ದಾಖಸಿದ್ದಾರೆ. ದೂರಿನಲ್ಲಿ ಬೋನಿ ಕಪೂರ್ ಅವರ ಕ್ರೆಡಿಟ್ ಕಾರ್ಡ್ ನಕಲು ಮಾಡಲಾಗಿದೆ ಎಂದು ವಿವರಿಸಲಾಗಿದೆ.
ದೂರಿನಲ್ಲಿ ಏನಿದೆ?
ಈ ದೂರಿನಲ್ಲಿ, ಅಪರಿಚಿತ ವ್ಯಕ್ತಿ ಫೆಬ್ರವರಿ 9 ರಂದು ಕಪೂರ್ ಅವರ ವಿವರಗಳು ಮತ್ತು ಪಾಸ್‍ವರ್ಡ್ ಪಡೆಯುವ ಮೂಲಕ ಐದು ಬಾರಿ ಆನ್‍ಲೈನ್ ವಹಿವಾಟುಗಳನ್ನು ನಡೆಸಲು ಕ್ರೆಡಿಟ್ ಕಾರ್ಡ್ ಬಳಸಿದ್ದಾನೆ. ಮಾರ್ಚ್ 30 ರಂದು ತಮ್ಮ ಬ್ಯಾಂಕ್ ಕಾರ್ಯ ನಿರ್ವಾಹಕರು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಕರೆ ಮಾಡಿದಾಗ ಕಪೂರ್ ಅವರಿಗೆ ವಂಚನೆಯ ಬಗ್ಗೆ ತಿಳಿದುಬಂದಿದೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ
ಪ್ರಸ್ತುತ ತನಿಖೆ ಆರಂಭವಾಗಿದ್ದು, ಆರೋಪಿಯನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಂಬೋಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.