ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ (Mumbai) ಪೊಲೀಸರು ಆರೋಪಿ ಧರ್ಮರಾಜ್ ಕಶ್ಯಪ್‌ನ ಮೂಳೆ ಪರೀಕ್ಷೆಗೆ (Ossification Test) ಹಾಜರುಪಡಿಸಿದ್ದು, ಇದರಲ್ಲಿ ಆತ ಅಪ್ರಾಪ್ತನಲ್ಲ ಎಂಬುದು ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದರು. ಬಂಧಿತರನ್ನು ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್ (23) ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್ (19) ಎಂದು ಗುರುತಿಸಲಾಗಿದೆ. ಇನ್ನೂ ಭಾನುವಾರ ರಾತ್ರಿ ಪುಣೆಯ ಪ್ರವೀಣ್ ಲೋಂಕರ್‌ನನ್ನು (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
Advertisement
ಬಂಧಿತ ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಧರ್ಮರಾಜ್ ಕಶ್ಯಪ್ ಪರ ವಕೀಲರು ಆತ ಅಪ್ರಾಪ್ತ ಎಂದು ವಾದಿಸಿದ್ದರು. ಈ ವೇಳೆ ನ್ಯಾಯಾಲಯವು ಕಶ್ಯಪ್ ಮೂಳೆ ಪರೀಕ್ಷೆಗೆ ಆದೇಶಿಸಿತ್ತು. ಪರೀಕ್ಷೆಯಲ್ಲಿ ಆತ ಅಪ್ರಾಪ್ತನಲ್ಲ ಎಂದು ಸಾಬೀತಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 21ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
Advertisement
Advertisement
ಈ ಪ್ರಕರಣದಲ್ಲಿ ಬಂಧಿತನಾದ ಮತ್ತೋರ್ವ ಆರೋಪಿ ಪ್ರವೀಣ್ ಲೋಂಕರ್, ನಿರ್ಮಲ್ ನಗರ ಫೈರಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವ ಶುಭಂ ಲೋಂಕರ್ ಸಹೋದರ ಎಂದು ತಿಳಿದು ಬಂದಿದೆ. ಈ ಸಹೋದರರ ಮೇಲೆ ಹತ್ಯೆಗೆ ಸಂಚು ರೂಪಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement
ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಭಾನುವಾರ (ಇಂದು) ಹೊತ್ತುಕೊಂಡಿದೆ. 66 ವರ್ಷದ ಹಿರಿಯ ರಾಜಕಾರಣಿಯನ್ನು ಶನಿವಾರ ರಾತ್ರಿ ದಸರಾ ಆಚರಣೆಯ ಸಂದರ್ಭದಲ್ಲಿ ಮುಂಬೈನ (Mumbai) ಬಾಂದ್ರಾದಲ್ಲಿರುವ ಅವರ ಕಚೇರಿಯ ಹೊರಗೆ ಗುಂಡಿಕ್ಕಿ ಹತ್ಯೆಮಾಡಲಾಗಿತ್ತು.