ತೆಲುಗು ಸಿನಿಮಾ ರಂಗದ ‘ಬಾಂಡ್ ಆಫ್ ತೆಲುಗು ಸಿನಿಮಾ’ ಎಂದೇ ಖ್ಯಾತರಾಗಿದ್ದ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. ತೆಲುಗಿನ ಪ್ರಿನ್ಸಿ ಮಹೇಶ್ ಬಾಬು ಅವರು ತಂದೆಯೂ ಆಗಿರುವ ಇವರು, ತೆಲುಗಿನಲ್ಲಿ ಸಾಕಷ್ಟು ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 70, 80ರ ದಶಕದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದ ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವರಾಮಕೃಷ್ಣಮೂರ್ತಿ. ಹುಟ್ಟಿದ್ದ 1942 ಮೇ 31 ರಂದು. ತೆನಾಲಿ ಬುರ್ರಿಪಾಳ್ಯದಲ್ಲಿ ಇವರು ಹುಟ್ಟಿದ್ದು.
Advertisement
1964ರಲ್ಲಿ ತೆರೆಕಂಡ ತೇನ ಮನಸಲು ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಇವರು ಬಿಎಸ್ಸಿ ಪದವಿಧರರಾಗಿದ್ದರೂ, ಬಣ್ಣದ ಮೇಲಿನ ಪ್ರೀತಿಯಿಂದಾಗಿ ನಾಟಕ ಪ್ರಪಂಚಕ್ಕೆ ಕಾಲಿಟ್ಟರು. ಕೇವಲ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ 16 ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟರಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗೂಡಚಾರಿ 116, ಮೋಸಗಾಡು, ಪಂದಂಡಿ ಕಾಪುರಂ, ಮಂಚಿ ಕುಟುಂಬಂ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ
Advertisement
Advertisement
ಸಿನಿಮಾ, ನಾಟಕಗಳಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ಕೃಷ್ಣ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಲೋಕಸಭಾ ಸದಸ್ಯರಾಗಿಯೂ ಜನಪರ ಕೆಲಸಗಳನ್ನೂ ಮಾಡಿದ್ದಾರೆ. ಇವರ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಿಂದ ದೂರವಿದ್ದರೂ, ಇವರ ಪುತ್ರ ಮಹೇಶ್ ಬಾಬು ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
Advertisement
ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.