ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಎಂ. ಸತೀಶ್ ರೆಡ್ಡಿ (MLA Sathish Reddy Mother) ಅವರ ತಾಯಿ ವಿಧಿವಶರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಾಪಮ್ಮ ಅವರು ಇಂದು ಬೆಳಗ್ಗೆ ಸತೀಶ್ ರೆಡ್ಡಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: 20 ಬಾಕ್ಸ್ ಟೊಮೆಟೋ 58 ಸಾವಿರಕ್ಕೆ ಮಾರಾಟ- ರೈತ ಫುಲ್ ಖುಷ್
Advertisement
ಹೊಂಗಸಂದ್ರದ ಶಾಸಕರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಹೊಂಗಸಂದ್ರದ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.
Advertisement
Advertisement
ತಾಯಿಯ ಜೊತೆ ಅತೀವ ಪ್ರೀತಿ ಹೊಂದಿದ್ದ ಶಾಸಕರು ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ತಾಯಿ ಕಾಲಿಗೆ ಪೂಜೆ ಸಲ್ಲಿಸಿದ್ದರು. ಇದೀಗ ತಾಯಿಯ ನಿಧನದಿಂದ ತೀವ್ರ ದುಃಖಿತರಾಗಿದ್ದಾರೆ.
Advertisement
Web Stories