ಬಾಗಲಕೋಟೆ: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು, ಮಾಜಿ ಸಚಿವ ಈಶ್ವರಪ್ಪ ಮೇಲಿನ ಆರೋಪ ಪ್ರಕರಣವನ್ನು ಎಲ್ಲ ಆಯಾಮಾದಲ್ಲೂ ತನಿಖೆ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರ‍್ಯಾರು ಹತ್ತಿರ ಏನೇನು ಮಾಹಿತಿ ಇದೆ ಅದೆಲ್ಲ ಮಾಹಿತಿ ಕಲೆ ಹಾಕಿ ತನಿಖೆ ಮಾಡಲಾಗುತ್ತದೆ. ಬರುವಂತಹ ದಿನದಲ್ಲಿ ಎಲ್ಲ ಗೊತ್ತಾಗುತ್ತದೆ ಎಂದರು. ಇದನ್ನೂ ಓದಿ: ನಾವೆಲ್ಲಾ ಬಾರ್‌ನಲ್ಲಿ ಕುಡಿದಿದ್ವಿ, ಸಂತೋಷ್ ಫ್ರೂಟ್ ಜ್ಯೂಸ್ ತಗೊಂಡು ರೂಮ್‍ಗೆ ಹೋಗಿದ್ದರು – ಸ್ನೇಹಿತರು ಹೇಳಿದ್ದೇನು?
ಇಂದು ಶುಕ್ರವಾರ ಜಿಲ್ಲೆಯ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ್ ಪುತ್ರಿಯ ಮದುವೆಗೆ ಆಗಮಿಸಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್‍ನಲ್ಲಿ ಒಬ್ಬೊಬ್ಬರು ಲೋಫರ್ ಗಳಿದ್ದಾರೆ. ಅವರಿಂದಲೇ ಈಶ್ವರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ
ಈಗಾಗಲೇ ಆ ಬಗ್ಗೆ ನಿನ್ನೆಯೇ ಹೇಳಿದ್ದೇನೆ. ಈಗ ಹೇಳಿದರೆ ನೀವು ಸುದ್ದಿ ಹಾಕಲ್ಲ ಎಂದು ನಗೆ ಚಟಾಕಿಯನ್ನು ಹಾರಿಸಿದರು. ನಂತರ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬರುತ್ತಾರೆ. ಆಗ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ನುನುಚಿಕೊಂಡರು.
ಎಸ್ ಆರ್ ಪಾಟೀಲ್‍ರ ಹೋರಾಟ ಸ್ವಾಗತಾರ್ಹ ಮಾಜಿ ಸಚಿವ ಎಸ್ ಆರ್ ಪಾಟೀಲ್‍ರ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅವರ ಸರ್ಕಾರ ಇದ್ದಾಗ ಇದನ್ನ ಮಾಡಿದರೆ ಅವರಿಗೆ ಒಳ್ಳೆಯ ಹೆಸರು ಬರ್ತಿತ್ತು. ಎಸ್ ಆರ್ ಪಾಟೀಲ್‍ರವರು ಮಂತ್ರಿ ಆಗಿದ್ದರು. ಐದು ವರ್ಷ ಸರ್ಕಾರ ಇತ್ತು. ನಂತರ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆಗ ಹೋರಾಟ ಮಾಡಿದರೆ, ಈಗ ಟ್ರ್ಯಾಕ್ಟರ್ ರ್‍ಯಾಲಿ ಮಾಡುವ ಅವಶ್ಯಕತೆ ಇರ್ತಿರಲಿಲ್ಲ ಎಂದು ತಿಳಿಸಿದರು.