ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದ ಬಳಿ ಮಂಗಳವಾರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಚೀನಾದ ಪ್ರಜೆಗಳು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ.
ಮಂಗಳವಾರ ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಇನ್ಸ್‌ಟಿಟ್ಯೂಟ್ ಬಳಿ ನಡೆದ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚೀನಿ ಪ್ರಜೆಗಳನ್ನು ಗುರಿಯಾಗಿಸಿ ಮಹಿಳಾ ಆತ್ಮಾಹುತಿ ಬಾಂಬರ್ ನಡೆಸಿರುವುದಾಗಿ ತಿಳಿದು ಬಂದಿದೆ.
Advertisement
Advertisement
ವರದಿಗಳ ಪ್ರಕಾರ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮುಗಿಸಿ ಹಿಂದಿರುಗುತ್ತಿದ್ದ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದೆ. ವ್ಯಾನ್‌ನಲ್ಲಿ ಮೂವರು ಚೀನಾದ ಹಾಗೂ ಇತರ ಉಪನ್ಯಾಸಕರು ಇದ್ದರು. ಒಟ್ಟು 8 ಜನರಿದ್ದ ವ್ಯಾನ್‌ನಲ್ಲಿ ರಿಮೋಟ್ ಕಂಟ್ರೋಲ್ ಮುಖಾಂತರ ಸ್ಫೋಟವನ್ನು ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ತಾಳೆ ಎಣ್ಣೆ ರಫ್ತು ನಿಷೇಧ ವಿಸ್ತರಿಸಲು ಇಂಡೋನೇಷ್ಯಾ ಚಿಂತನೆ
Advertisement
Advertisement
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮಜೀದ್ ಬ್ರಿಗೇಡ್ ಸಂಘಟನೆ ಈ ಕೃತ್ಯವನ್ನು ತಾನು ನಡೆಸಿದೆ ಎಂದು ಹೇಳಿದೆ. ಮಹಿಳಾ ಬಾಂಬರ್ ಶಾರಿ ಬಲೋಚ್ ಈ ದಾಳಿ ನಡೆಸಿದ್ದಾಳೆ.
ಘಟನೆ ಹೇಗಾಯ್ತು?
ವಿಶ್ವವಿದ್ಯಾಲಯದ ಬಳಿಯಲ್ಲಿರುವ ರಸ್ತೆ ಬದಿ ನಿಂತಿದ್ದ ಮಹಿಳಾ ಬಾಂಬರ್ ಚೀನಾ ಉಪನ್ಯಾಸಕರನ್ನು ಗುರಿಯಾಗಿಸಿಕೊಂಡಿದ್ದಳು. ಉಪನ್ಯಾಸಕರಿದ್ದ ವ್ಯಾನ್ ಮಹಿಳೆ ಬಳಿ ಬರುತ್ತಿದ್ದಂತೆ ಆಕೆ ತನ್ನ ಕೈಯಲ್ಲಿದ್ದ ರಿಮೋಟ್ ಕಂಟ್ರೋಲ್ ಅನ್ನು ಒತ್ತಿ, ಸ್ಫೋಟವನ್ನು ನಡೆಸಿದ್ದಾಳೆ. ಈ ವೇಳೆ ಭಾರೀ ಸ್ಫೋಟ ಸಂಭವಿಸಿ, ಬಾಂಬರ್ ಸೇರಿದಂತೆ ಮೂವರು ಚೀನಾದ ಉಪನ್ಯಾಸಕರು ಸಾವನ್ನಪ್ಪಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಇಬ್ಬರು ಚೀನಾ ಪ್ರಜೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಚೀನಾದ ಎಂಜಿನಿಯರ್‌ಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಐಇಡಿ ದಾಳಿ ನಡೆಸಿತ್ತು. ಘಟನೆಯಲ್ಲಿ 9 ಚೀನಾದ ಪ್ರಜೆಗಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹದಗೆಟ್ಟಿದೆ: ಅಮೆರಿಕ