ಬೆಂಗಳೂರು: ಫೇಸ್‌ಬುಕ್ ಗ್ರೂಪ್‌ನಲ್ಲಿ ಪೋಸ್ಟ್ ಹಾಕಿ ಮನೆಗೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡುತ್ತಿದ್ದ ಬಾಂಬೆ ಲೇಡಿಸ್ ಗ್ಯಾಂಗ್ ಅನ್ನು ಬೆಂಗಳೂರು ಪೊಲೀಸರು (ಹೆಣ್ಣೂರು ಪೊಲೀಸ್ ಠಾಣಾ) ಮುಂಬೈನಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳನ್ನು ಪ್ರೀಯಾಂಕ, ಮಹಾದೇವಿ, ವನಿತಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದನ್ನೂ ಓದಿ: ಜುಲೈ 21ಕ್ಕೆ ಹಾಜರಾಗಿ – ಸೋನಿಯಾ ಗಾಂಧಿಗೆ ಮತ್ತೆ ED ಸಮನ್ಸ್
Advertisement
Advertisement
ಚಾಲಕಿ ಮಹಿಳೆಯರು ಬಾಂಬೆಯಲ್ಲೂ ತಮ್ಮ ಕೈಚಳಕ ತೋರಿಸಿ ಬಂಧಿತರಾಗಿದ್ದರು. ಎಲ್ಲಾದರೂ ಮನೆಕೆಲಸದವರಿಂದ ಕಳ್ಳತನ ಆಯ್ತು ಅಂದ್ರೆ, ಮುಂಬೈ ಪೊಲೀಸರು ಮೊದಲು ಈ ಗ್ಯಾಂಗ್ ಸದಸ್ಯರನ್ನು ಹುಡುಕುತ್ತಿದ್ದರು.
Advertisement
ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್ಗಳಿಗೆ ಕಮೀಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಈ ಚಾಲಾಕಿಯರು 36 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಬಾಂಬೆಯಿಂದ ಬೆಂಗಳೂರಿಗೆ ಬಂದು ಇಲ್ಲಿಯೂ ತಮ್ಮ ಕೈಚಳಕ ತೋರಿಸಲು ಪ್ರಾರಂಭಿಸಿದ್ದರು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ಅರ್ಜುನ್ ಜನ್ಯ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾ ಟೈಟಲ್ : ಸೌತ್ ಸ್ಟಾರ್ಸ್ ರಿಲೀಸ್
Advertisement
ಕಳ್ಳಿಯರ ಪ್ಲಾನ್ ಹೇಗಿತ್ತು?
ಫೇಸ್‌ಬುಕ್ ನಲ್ಲಿ ಮನೆಕೆಲಸದ ಜಾಹೀರಾತು ನೀಡುತ್ತಿದ್ದರು. ರೆಫರ್ ಹೌಸ್ ಮೇಡ್ಸ್ ಎಂದು ಗ್ರೂಪ್ ಮಾಡಿಕೊಂಡಿದ್ದರು. ಗ್ರೂಪ್‌ನಲ್ಲಿ ಸಂಪರ್ಕ ಮಾಡಿದವರ ಬಳಿ ಕೆಲಸಕ್ಕೆ ಸೇರುತ್ತಿದ್ದರು. ಬಳಿಕ ತುಂಬಾ ಒಳ್ಳೆಯವರಂತೆ ವಿಶ್ವಾಸ ಗಳಿಸಿ ತಮ್ಮ ಕೈಚಳಕ ತೋರಿಸುತ್ತಿದ್ದರು. ಹಾಗೆಯೇ ಹೆಣ್ಣೂರು ಠಾಣಾ ವ್ಯಾಪ್ತಿಯ ಅರವಿಂದ್ ಎಂಬವರ ಮನೆಯಲ್ಲಿ ಮನೆಯಲ್ಲಿ ಕಳ್ಳತನ ಮಾಡಿ ಮುಂಬೈಗೆ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಾದಗಿನಿಂದ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಮುಂಬೈಗೆ ತೆರಳಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.