ಕಾಲೇಜಿನಲ್ಲಿ ಹಿಜಬ್‌ ನಿಷೇಧ: ಕಾಲೇಜು ನಿರ್ಧಾರ ಎತ್ತಿಹಿಡಿದ ಬಾಂಬೆ ಹೈಕೋರ್ಟ್‌

Public TV
1 Min Read
Hijab

– 9 ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಜಾ

ಮುಂಬೈ: ಕಾಲೇಜು ಆವರಣದಲ್ಲಿ ಹಿಜಬ್‌ (Hijab), ಮುಸುಕು, ಕ್ಯಾಪ್‌ಗಳು ಇತ್ಯಾದಿ ನಿಷೇಧವನ್ನು ಪ್ರಶ್ನಿಸಿ ಮುಂಬೈ ಕಾಲೇಜಿನ ಒಂಬತ್ತು ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್ (Bombay High Court) ತಿರಸ್ಕರಿಸಿದೆ.

ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ (ಸಿಟಿಇಎಸ್) ಎನ್‌ಜಿ ಆಚಾರ್ಯ ಮತ್ತು ಚೆಂಬೂರಿನ (ಪೂರ್ವ) ಡಿಕೆ ಮರಾಠೆ ಕಾಲೇಜು ತೆಗೆದುಕೊಂಡ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಶಿಸಲ್ಲ ಎಂದು ನ್ಯಾಯಮೂರ್ತಿ ಎ.ಎಸ್.ಚಂದೂರ್ಕರ್ ಮತ್ತು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತಿಳಿಸಿದೆ. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್‌ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ

Bombay High Court

ಅರ್ಜಿದಾರರ ಹಕ್ಕು ಎಂಬ ಕಾರಣಕ್ಕೆ ಭಾರತೀಯ ಸಂವಿಧಾನದ ಆರ್ಟಿಕಲ್ 19 (1) (ಎ) ಮತ್ತು ಆರ್ಟಿಕಲ್ 25 ರ ಅಡಿಯಲ್ಲಿ ವಸ್ತ್ರ ಸಂಹಿತೆ ಉಲ್ಲಂಘಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಕಂಪ್ಯೂಟರ್ ಸೈನ್ಸ್‌ ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ CTES ನಿರ್ವಹಣೆಯ ನಿರ್ಧಾರವನ್ನು ‘ನಿರಂಕುಶ, ಅಸಮಂಜಸ ಎಂದು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅರ್ಜಿ ವಜಾ ಆಗಿರುವುದರಿಂದ ಈಗ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಬೇಟೆಯಾಡಿದ ಸೇನೆ

ಕಾಲೇಜು ವಿಧಿಸಿರುವ ಹೊಸ ವಸ್ತ್ರಸಂಹಿತೆ ಖಾಸಗಿತನ, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ವಕೀಲ ಅಲ್ತಾಫ್ ಖಾನ್ ಮೂಲಕ ವಾದಿಸಿದ್ದರು. ಹೈಕೋರ್ಟ್ ಆದೇಶದ ವಿರುದ್ಧ ಉನ್ನತ ನ್ಯಾಯಾಲಯದ ಮೊರೆ ಹೋಗುವ ಮೊದಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಮಾಲೋಚಿಸುವುದಾಗಿ ಖಾನ್ ತಿಳಿಸಿದ್ದಾರೆ.

Share This Article