ಮುಂಬೈ: 15 ವರ್ಷದ ಅಪ್ರಾಪ್ತ ಅತ್ಯಾಚಾರ (Rape) ಸಂತ್ರಸ್ತೆಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಲು ಬಾಂಬೆ ಹೈಕೋರ್ಟ್ (Bombay Highcourt) ಔರಂಗಬಾದ್ ಪೀಠ ನಿರಾಕರಿಸಿದೆ.
28 ವಾರಗಳ ಹಂತದಲ್ಲಿ ಬಲವಂತವಾಗಿ ಹೆರಿಗೆ ಮಾಡಿಸಿದರೆ ಮಗು ಜೀವಂತವಾಗಿ ಜನಿಸುತ್ತದೆ. ನವಜಾತ ಶಿಶುವಿಗೆ ಆರೈಕೆಯ ಅಗತ್ಯವಿರುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಗರ್ಭಪಾತಕ್ಕೆ (Abortion) ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಧೀಶರಾದ ಆರ್‌ವಿ ಘುಗೆ (R.V.Ghuge) ಮತ್ತು ವೈಜಿ ಖೋಬ್ರಗಡೆ (Y.G.Khobragade) ಅವರ ಪೀಠವು ಜೂನ್ 20ರಂದು ಈ ಆದೇಶವನ್ನು ನೀಡಿದೆ. ಇದನ್ನೂ ಓದಿ: 16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್
Advertisement
Advertisement
ಅತ್ಯಾಚಾರಕ್ಕೆ ಒಳಗಾದ ಬಾಲಕಿಯ 28 ವಾರಗಳ ಗರ್ಭಪಾತಕ್ಕೆ ಅನುಮತಿ ಕೋರಿ ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. 2023ರ ಫೆಬ್ರವರಿಯಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದು, 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಪತ್ತೆಯಾಗಿದ್ದಾಳೆ ಎಂದು ಮಹಿಳೆ ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸೌಜನ್ಯ ರೇಪ್, ಮರ್ಡರ್ ಕೇಸ್- ಆರೋಪಿ ಸಂತೋಷ್ ರಾವ್ ಖುಲಾಸೆ
Advertisement
ಘಟನೆಯ ಕುರಿತು ವ್ಯಕ್ತಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಮಗು ಜೀವಂತವಾಗಿ ಜನಿಸುತ್ತದೆ ಮತ್ತು ನವಜಾತ ಶಿಶುವನ್ನು ಆರೈಕೆ ಮಾಡಬೇಕಾಗುತ್ತದೆ. ಅಲ್ಲದೇ ಸಂತ್ರಸ್ತೆಗೆ ಅಪಾಯವಾಗುವ ಸಾಧ್ಯತೆಗಳಿವೆ ಎಂದು ವೈದ್ಯರು ಕೋರ್ಟ್ ಗಮನಕ್ಕೆ ತಂದಿದ್ದರು. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಪೋಕ್ಸೊ ಕೇಸ್ ರದ್ದಿಗೆ ದೆಹಲಿ ಪೊಲೀಸರ ಶಿಫಾರಸ್ಸು
Advertisement
ಈ ಕುರಿತು ಹೈಕೋರ್ಟ್ ಬಲತ್ಕಾರವಾಗಿ ಹೆರಿಗೆಯಾದರೆ ಮಗುವಿನ ಆರೋಗ್ಯದಲ್ಲಿ ಅಥವಾ ಬೆಳವಣಿಗೆಯಲ್ಲಿ ಸಮಸ್ಯೆ ಕಾಣಿಸುವ ಸಾಧ್ಯತೆಯಿದೆ. ಒಂದು ವೇಳೆ ಸಾಮಾನ್ಯ ಹೆರಿಗೆಗೆ 12 ವಾರಗಳ ಮುನ್ನ ಮಗುವಿನ ಜನನವಾದರೆ ಅದರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಗಣಿಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ
ಮಗು ಜೀವಂತವಾಗಿ ಜನಿಸುವ ಕಾರಣ 12 ವಾರಗಳ ನಂತರ ವೈದ್ಯರ ಸಲಹೆಯ ಮೇರೆಗೆ ಮಗು ಹುಟ್ಟಲು ಅವಕಾಶ ಮಾಡಿಕೊಡಬಹುದು. ಮಗುವಿನ ಜನನವಾದ ಬಳಿಕ ಸಂತ್ರಸ್ತೆ ಆ ಶಿಶುವನ್ನು ಅನಾಥಾಶ್ರಮಕ್ಕೆ (Orphanage) ಕೊಡಲು ಬಯಸುವುದಾದರೆ ಸಂತ್ರಸ್ತೆಗೆ ಈ ಕುರಿತು ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ. ಬಲವಂತದ ಹೆರಿಗೆಗೆ ಅನುಮತಿ ನೀಡುವುದರಿಂದ ಅವಧಿ ಪೂರ್ವ ಹಂತದಲ್ಲಿ ಮಗುವನ್ನು ಈ ಜಗತ್ತಿಗೆ ತರಬೇಕಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್ ಕೋರ್ಟ್ ನಿರಾಕರಣೆ
ಮಗು ಸಂಪೂರ್ಣ ಬೆಳವಣಿಗೆಯಾಗಿ ಸ್ವಾಭಾವಿಕ ಹೆರಿಗೆಯಾದರೆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ದತ್ತು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಕೋರ್ಟ್ ತಿಳಿಸಿದೆ. ಬಳಿಕ ಸಂತ್ರಸ್ತೆಯ ತಾಯಿ ಬಾಲಕಿ ಮಗುವಿಗೆ ಜನ್ಮ ನೀಡುವವರೆಗೂ ಯಾವುದಾದರೂ ಎನ್‌ಜಿಒ ಅಥವಾ ಆಸ್ಪತ್ರೆಯಲ್ಲಿ ಆಕೆಯನ್ನು ಇರಿಸಿಕೊಳ್ಳಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಮನವಿಯನ್ನು ಆಲಿಸಿದ ಬಳಿಕ ಸಂತ್ರಸ್ತೆಯನ್ನು ನಾಸಿಕ್‌ನಲ್ಲಿರುವ (Nashik) ಗರ್ಭಿಣಿಯರನ್ನು ಆರೈಕೆ ಮಾಡುವ ಆಶ್ರಯ ಮನೆ ಅಥವಾ ಔರಂಗಬಾದ್‌ನಲ್ಲಿ ಮಹಿಳೆಯರಿಗಾಗಿ ಇರುವ ಸರ್ಕಾರಿ ಆಶ್ರಯ ಮನೆಗಳಲ್ಲಿ ಇರಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ- ಯುವಕನಿಗೆ 20 ವರ್ಷ ಜೈಲು, 1 ಲಕ್ಷದ 10 ಸಾವಿರ ರೂ. ದಂಡ
ಅಷ್ಟು ಮಾತ್ರವಲ್ಲದೇ ಹೆರಿಗೆಯ ಬಳಿಕ ಮಗುವನ್ನು ಇಟ್ಟುಕೊಳ್ಳುವ ಅಥವಾ ದತ್ತು ನೀಡುವ ನಿರ್ಧಾರವನ್ನು ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಸಂತ್ರಸ್ತೆಗೆ ಇದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: ಲಿಂಗಾಯತ ಅವಹೇಳನ ಕೇಸಲ್ಲಿ ಸಿದ್ದರಾಮಯ್ಯಗೆ ರಿಲೀಫ್