ಮುಂಬೈ: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ (Bombay High Court) ಜಾಮೀನು ಮಂಜೂರು ಮಾಡಿದೆ. ಆದರೆ ಆತನಿಗೆ ನಾಪತ್ತೆಯಾಗಿರುವ ಸಂತ್ರಸ್ತ (Victim) ಯುವತಿಯೊಂದಿಗೆ 1 ವರ್ಷದೊಳಗೆ ಮದುವೆಯಾಗಬೇಕು (Marriage) ಎಂದು ಷರತ್ತು ವಿಧಿಸಿದೆ.
ಹೌದು, ಅತ್ಯಾಚಾರ ಆರೋಪಿ (Rape Accused) 22 ವರ್ಷದ ಯುವತಿಯೊಂದಿಗೆ ಸಮ್ಮತಿಯ ಸಂಬಂಧದಲ್ಲಿಯೇ ಇದ್ದರು. ಆದರೆ ಆಕೆ ಗರ್ಭಿಣಿಯಾಗಿದ್ದನ್ನು ತಿಳಿದ ಯುವಕ ಬಳಿಕ ಆಕೆಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದ. ಇದರಿಂದ ಬೇಸತ್ತ ಯುವತಿ ಅತ್ಯಾಚಾರ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿದ್ದಳು.
Advertisement
Advertisement
ಯುವತಿ 2020ರ ಫೆಬ್ರವರಿಯಲ್ಲಿ ಯುವಕನ ವಿರುದ್ಧ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನಲ್ಲಿ ಅವರು 2018ರಿಂದ ಸಂಬಂಧ ಹೊಂದಿದ್ದು, ಈ ವಿಚಾರ ತಮ್ಮ ಕುಟುಂಬಗಳಿಗೂ ತಿಳಿದಿತ್ತು. ಯಾವುದೇ ವಿರೋಧವೂ ಇರಲಿಲ್ಲ ಎಂದು ತಿಳಿಸಿದ್ದಳು. ಆಕೆಯ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
Advertisement
ಯುವತಿ ತಾನು ಗರ್ಭಿಣಿ ಎಂಬುದನ್ನು ತಿಳಿದು, ಅದನ್ನು ಆರೋಪಿಗೆ ತಿಳಿಸಿದ ಬಳಿಕ ಆತ ಅವಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದಾನೆ. ತನ್ನ ಗರ್ಭಾವಸ್ಥೆಯ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಲು ಇಷ್ಟಪಡದ ಕಾರಣ ಆಕೆ ತನ್ನ ಮನೆಯನ್ನು ತೊರೆದಿದ್ದಳು. 2020ರ ಜನವರಿ 27ರಂದು ಆಕೆ ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮವನ್ನೂ ನೀಡಿದ್ದಳು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರೈತರ ಖಾತೆಗೆ 2 ಸಾವಿರ ಹಣ ಬಿಡುಗಡೆ ಮಾಡಿದ ಪ್ರಧಾನಿ
Advertisement
ಬಳಿಕ ಜನವರಿ 30ರಂದು ಸಂತ್ರಸ್ತ ಯುವತಿ ಮಗುವನ್ನು ಕಟ್ಟಡವೊಂದರ ಮುಂದೆ ಬಿಟ್ಟು ಹೋಗಿದ್ದಳು. ಆಕೆ ಮಗುವನ್ನು ತ್ಯಜಿಸಿದಕ್ಕಾಗಿ ಆಕೆಯ ವಿರುದ್ಧ ಪೊಲೀಸರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಇದೆಲ್ಲದರ ಬಳಿಕ ಆರೋಪಿ ಯುವತಿಯನ್ನು ಮದುವೆಯಾಗಲು ಹಾಗೂ ಮಗುವಿನ ಪಿತೃತ್ವವನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಹೈಕೋರ್ಟ್‌ಗೆ ಭರವಸೆ ನೀಡಿದ್ದಾನೆ. ಆದರೆ ಯುವತಿ ನಾಪತ್ತೆಯಾಗಿದ್ದು, ಮಗುವನ್ನು ಈಗಾಗಲೇ ಶಿಶುಪಾಲನಾ ಕೇಂದ್ರದಿಂದ ದತ್ತು ನೀಡಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಬಲಪ್ರಯೋಗದಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಸುನೀಲ್ ಕುಮಾರ್ ಬಜಾಲ್
ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ವಯಸ್ಕರಾಗಿದ್ದು, ಇಬ್ಬರ ಸಂಬಂಧ ಒಮ್ಮತದಿಂದ ಕೂಡಿದ್ದರಿಂದ ಆರೋಪಿಗೆ ಜಾಮೀನು ನೀಡಲಾಗಿದೆ. ಸಂತ್ರಸ್ತೆಯನ್ನು 1 ವರ್ಷದೊಳಗೆ ಹುಡುಕಿ ಮದುವೆಯಾಗಬೇಕು. ಆದರೆ 1 ವರ್ಷದ ನಂತರದ ಹೇಳಿಕೆ ಬದ್ಧರಾಗಿರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.