ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ

Public TV
1 Min Read
ram mandir 1

– ರಾಮಮಂದಿರ ಸ್ಫೋಟಿಸಿ ಬಾಬರಿ ಮಸೀದಿ ನಿರ್ಮಿಸುವ ಎಚ್ಚರಿಕೆ

ಲಕ್ನೋ: ಅಯೋಧ್ಯೆಯಲ್ಲಿರುವ ಶ್ರೀರಾಮ ಜನ್ಮಭೂಮಿ ದೇವಸ್ಥಾನವನ್ನು (Ayodhya Ram Mandir) ಆರ್‌ಡಿಎಕ್ಸ್‌ನೊಂದಿಗೆ ಸ್ಫೋಟಿಸುವ ಮತ್ತು ಬಾಬರಿ ಮಸೀದಿಯನ್ನು ನಿರ್ಮಿಸುವ ಬೆದರಿಕೆಗಳು ಬಂದಿವೆ. ಟ್ರಸ್ಟ್‌ನ ಸಿಎ ಚಂದನ್ ಕುಮಾರ್ ರೈ ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

2024ರ ಆಗಸ್ಟ್ 22 ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೆಲ್ಪ್‌ ಡೆಸ್ಕ್ ವಾಟ್ಸಾಪ್‌ಗೆ ಈ ಸಂದೇಶ ಬಂದಿದೆ. ಉರ್ದು ಭಾಷೆಯಲ್ಲಿ ಬರೆದ ಸಂದೇಶದಲ್ಲಿ ರಾಮಜನ್ಮಭೂಮಿ ದೇವಸ್ಥಾನವನ್ನು ನಾಲ್ಕು ಸಾವಿರ ಕಿಲೋ ಆರ್‌ಡಿಎಕ್ಸ್‌ನಿಂದ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಪ್ರಕರಣದ ತನಿಖೆಯ ವೇಳೆ ಬಿಹಾರ ಪ್ರಾಂತ್ಯದ ಭಾಗಲ್ಪುರ ಜಿಲ್ಲೆಯ ಬಾಬರ್ ಗಂಜ್ ನಿವಾಸಿ ಮೊಹಮ್ಮದ್ ಅಮನ್ ಹೆಸರು ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಾಮಮಂದಿರ ಸೇರಿ ಹಿಂದೂ ದೇವಾಲಯಗಳ ಮೇಲೆ ದಾಳಿ ಬೆದರಿಕೆ; ಖಲಿಸ್ತಾನಿ ಉಗ್ರ ಪನ್ನುನ್ ವೀಡಿಯೋ ರಿಲೀಸ್‌

AYODHYA RAMA MANDIR

ಪ್ರಕರಣ ಬೆನ್ನಲ್ಲೆ ಈ ಹಿನ್ನೆಲೆ ಪ್ರಕರಣದ ತನಿಖೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈಗಾಗಲೇ ಜೈಲಿನಲ್ಲಿ ಬಂಧಿತರಾಗಿರುವ ಆರೋಪಿ ಮೊಹಮ್ಮದ್ ಅಮಾನ್ ಜಾಮೀನು ಅರ್ಜಿ ವಿಚಾರಣೆಯ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ III ಅಶೋಕ್ ಕುಮಾರ್ ದುಬೆ ಈ ಆದೇಶ ನೀಡಿದ್ದಾರೆ.

ಘಟನೆಯ ತನಿಖೆ ನಡೆಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರಿಗೆ ಮೂಲ ಕೇಸ್ ಡೈರಿ ಮತ್ತು ಅದರ ಎಲ್ಲಾ ನಮೂನೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಹಿಂದೂ ವಾಟ್ಸಪ್‌ ಗ್ರೂಪ್‌ ರಚನೆ, ಹಿರಿಯ ಅಧಿಕಾರಿ ನಿಂದನೆ ಆರೋಪ – ಇಬ್ಬರು IAS ಅಧಿಕಾರಿಗಳು ಅಮಾನತು

Share This Article