ನವದೆಹಲಿ: ರಾಷ್ಟ್ರ ರಾಜಧಾನಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು (Bomb Threat) ಬಂದಿವೆ. ಜೊತೆಗೆ 30 ಸಾವಿರ ಡಾಲರ್ ನೀಡಬೇಕಾಗಿ ಉಲ್ಲೇಖಿಸಿದ್ದಾರೆ.
ದೆಹಲಿಯ (Delhi) ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಪಶ್ಚಿಮ ವಿಹಾರ್‌ನಲ್ಲಿರುವ ಜಿಡಿ ಗೋಯೆಂಕಾ ಪಬ್ಲಿಕ್ ಸ್ಕೂಲ್ ಸೇರಿದಂತೆ 40ಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದ ತಪಾಸಣೆ ನಡೆಸಿದ ದೆಹಲಿ ಪೊಲೀಸರು, ಅನುಮಾನಾಸ್ಪದವಾಗಿ ಏನು ಪತ್ತೆಯಾಗದ ಕಾರಣ ಹುಸಿ ಬೆದರಿಕೆ ಕರೆ ಎಂದು ಘೋಷಿಸಿದ್ದಾರೆ.ಇದನ್ನೂ ಓದಿ: ಸರ್ಕಾರದ ಬೇಜವಾಬ್ದಾರಿತನದಿಂದ ಬಾಣಂತಿಯರು, ಹಸುಗೂಸುಗಳ ಸಾವು : ವಿಜಯೇಂದ್ರ
Advertisement
Advertisement
ದೆಹಲಿ ಪೊಲೀಸರ ಮಾಹಿತಿಗಳ ಪ್ರಕಾರ, ಭಾನುವಾರ (ಡಿ.08) ರಾತ್ರಿ 11:30ರ ಸುಮಾರಿಗೆ ಮೇಲ್ ಕಳುಹಿಸಲಾಗಿದೆ. ಇ-ಮೇಲ್‌ಗಳಲ್ಲಿ ಶಾಲಾ ಕ್ಯಾಂಪಸ್‌ನಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಇದರ ಸ್ಫೋಟದಿಂದ ಕಟ್ಟಡಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಹಾನಿಯಾಬಹುದು. ಇದನ್ನು ತಡೆಯಲು 30,000 ಡಾಲರ್ ಮೊತ್ತವನ್ನು ನೀಡಬೇಕು ಎಂದು ಉಲ್ಲೇಖಿಸಿದ್ದಾರೆ.
Advertisement
ಬಾಂಬ್ ಬೆದರಿಕೆಯ ಹಿನ್ನೆಲೆ ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಉಲ್ಲೇಖಿಸಿ ಶಾಲೆಗಳನ್ನು ಬಂದ್ ಮಾಡಿದ್ದಾರೆ. ದೆಹಲಿಯ ಎರಡು ಮತ್ತು ಹೈದರಾಬಾದ್‌ನ ಒಂದು ಸೇರಿದಂತೆ ರಾಷ್ಟ್ರದಾದ್ಯಂತ ಹಲವಾರು ಸಿಆರ್‌ಪಿಎಫ್ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ.
Advertisement
ಅ.21ರ ರಾತ್ರಿ ತಮಿಳುನಾಡಿನ ಸಿಆರ್‌ಪಿಎಫ್ ಶಾಲೆಗೆ ಮೊದಲ ಬಾರಿಗೆ ಬೆದರಿಕೆ ಬಂದಿದ್ದು, ಅದರ ನಂತರ ದೇಶದ ಎಲ್ಲಾ ಅಂಗಸಂಸ್ಥೆ ಶಾಲೆಗಳಿಗೆ ಎಚ್ಚರಿಕೆಯನ್ನು ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.
ಈ ಬಗ್ಗೆ ಮಾತನಾಡಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ (Manish Sisodia), 40 ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು, ನಮ್ಮ ಮಕ್ಕಳು ಸುರಕ್ಷಿತವಾಗಿಲ್ಲ ಎಂಬ ಕಾರಣಕ್ಕೆ ಆಘಾತವಾಗಿದೆ. ದೆಹಲಿಯಲ್ಲಿ ಬಿಜೆಪಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ರಾಷ್ಟ್ರ ರಾಜಧಾನಿ ಸುರಕ್ಷಿತವಾಗಿಲ್ಲ, ಇಂತಹ ಭಯದ ವಾತಾವರಣ ನಾನು ನೋಡಿರಲಿಲ್ಲ. ಬಿಜೆಪಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿ, ಇದಕ್ಕೆ `ಕೈ’ ಸರ್ಕಾರವೇ ಕಾರಣ – ಛಲವಾದಿ ನಾರಾಯಣಸ್ವಾಮಿ